ಉಪ್ಪಿನಂಗಡಿ | ಸ್ಫೋಟಕ ಬಳಸಿ ಮೀನುಗಳ ಮಾರಣಹೋಮ: ಹೊರ ರಾಜ್ಯದ ಮೂವರ ಬಂಧನ !

Prasthutha|

ಉಪ್ಪಿನಂಗಡಿ: ಗುಂಡ್ಯ ಹೊಳೆಯಲ್ಲಿ ಸ್ಫೋಟಕ ಬಳಸಿ ನೂರಾರು ಮೀನುಗಳು ಸಾವನ್ನಪ್ಪಿದ್ದು, ಕೃತ್ಯವೆಸಗಿದ ತೆಲಂಗಾಣ ಮೂಲದ ಮೂವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

- Advertisement -


ತೆಲಂಗಾಣ ಮೂಲದ ವೆಂಕಟೇಶ್, ರಾಮ, ರಾಜು ಬಂಧಿತ ಆರೋಪಿಗಳು.


ಮತ್ಸ್ಯ ತೀರ್ಥ ಎಂದೇ ಪರಿಗಣಿತವಾದ ಗುಂಡ್ಯ ಹೊಳೆಯ ಉದನೆ ತೂಗು ಸೇತುವೆಯ ಬಳಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಸ್ಥಳದಲ್ಲಿ ಬುಧವಾರ ಏಕಾಏಕಿ ನೂರಾರು ಮೀನುಗಳು ಸಾವನ್ನಪ್ಪಿರುವುದು ಕಂಡು ಬಂದಿದ್ದು, ಹೊಳೆಗೆ ವಿಷ ಪ್ರಾಶಣ ಮಾಡಿರುವ ಬಗ್ಗೆ ಶಂಕೆ ಮೂಡಿದೆ.

- Advertisement -


ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.



Join Whatsapp