ಶಾಸಕರನ್ನು ಖರೀದಿಸಲು ಪ್ರಯತ್ನ :ಮೂವರ ಬಂಧನ: 15 ಕೋಟಿ ರೂ. ವಶ

Prasthutha|

ಹೈದರಾಬಾದ್: ಆಡಳಿತಾರೂಢ ಟಿಆರ್ಎಸ್ ಪಕ್ಷದ ನಾಲ್ವರು ಶಾಸಕರಿಗೆ ಪಕ್ಷ ತೊರೆಯುವಂತೆ ಆಮಿಷವೊಡ್ಡಲು ಯತ್ನಿಸಿದ್ದ ಬಿಜೆಪಿಯ ಏಜೆಂಟುಗಳೆಂದು ಶಂಕಿಸುವ ಮೂವರು ವ್ಯಕ್ತಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರಿಂದ 15 ಕೋಟಿ ರೂ ಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ತೆಲಂಗಾಣದ ಮುನಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಬಿಜೆಪಿ ಟಿಆರ್ಎಸ್ ಪಕ್ಷದ ನಾಲ್ವರು ಶಾಸಕರೊಂದಿಗೆ ಕುದುರೆ ವ್ಯಾಪಾರ ನಡೆಸಲು ಮುಂದಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಟಿಆರ್ಎಸ್ ನ ನಾಲ್ವರು ಶಾಸಕರಾದ ಜಿ.ಬಾಲರಾಜು, ಬಿ.ಹರ್ಷವರ್ಧನ್ ರೆಡ್ಡಿ, ಆರ್.ಕಾಂತರಾವ್ ಮತ್ತು ರೋಹಿತ್ ರೆಡ್ಡಿ ಅವರಿಗೆ ಪಕ್ಷಾಂತರವಾಗಲು ನಗದು, ಹುದ್ದೆಗಳು ಮತ್ತು ಇತರ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ, ಸೈಬರಾಬಾದ್ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ, ಟಿಆರ್ಎಸ್ ಶಾಸಕರನ್ನು ಈ ಮೂವರು ಹಲವಾರು ಕೊಡುಗೆಗಳೊಂದಿಗೆ ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಈ ಮೂವರು ವ್ಯಕ್ತಿಗಳು ಯಾವ ಪಕ್ಷಕ್ಕೆ ಸೇರಿದವರು ಎಂಬ ಬಗ್ಗೆ ನಾವು ವಿವರಗಳನ್ನು ಕೇಳುತ್ತಿದ್ದೇವೆ ಎಂದು ರವೀಂದ್ರ ಹೇಳಿದರು.

ಆದಾಗ್ಯೂ, ಟಿಆರ್ಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಬಿಜೆಪಿಯ ಕೈವಾಡ ಎಂದು ಸರ್ಕಾರಿ ಸಚೇತಕ ಬಲ್ಕಾ ಸುಮನ್ ಆರೋಪಿಸಿದ್ದಾರೆ.



Join Whatsapp