ತುಮಕೂರು: ಜಾತ್ರೆಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತುಮಕೂರು ನಗರದ ಬಂಡೆಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಬಂಡೆಪಾಳ್ಯದಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲಕ ಅಮೋಘ (220, ಹನುಮಂತ(22), ಪ್ರತಾಪ್(20) ಬಂಧಿತ ಆರೋಪಿಗಳು.
ಸೋಮವಾರ ಸ್ನೇಹಿತನೊಂದಿಗೆ ಸಿದ್ದಗಂಗಾ ಮಠದ ಕೆಲಸಕ್ಕೆ ಬಂದಿದ್ದ ಪಿಯುಸಿ ವಿದ್ಯಾರ್ಥಿನಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಬಳಿಕ ಬಾಲಕಿಯನ್ನು ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.