ಪ್ರಧಾನಿ ಮೋದಿ ಭಾಷಣದ ವೇಳೆ ಡ್ರೋನ್ ಹಾರಾಟ: ಮೂವರ ಬಂಧನ

Prasthutha|

ಅಹಮದಾಬಾದ್: ಗುಜರಾತ್ ನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಡ್ರೋನ್ ಹಾರಾಟ ಮಾಡಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಬಂಧಿತರನ್ನು ನಿಕುಲ್ ರಮೇಶ್ ಪರ್ಮಾರ್, ರಾಕೇಶ್ ಕಲು ಭಾರವಾಡ್ ಮತ್ತು ರಾಜೇಶ್ ಕುಮಾರ್ ಮಂಗೀಲಾಲ್ ಎಂದು ಗುರುತಿಸಲಾಗಿದೆ.


ಪ್ರಧಾನಿಯವರ ಸಾರ್ವಜನಿಕ ಸಭೆಯ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ‘ನೋ ಡ್ರೋನ್ ಪ್ಲೈ ಝೋನ್’ ಘೋಷಣೆ ಮಾಡಲಾಗಿತ್ತು. ಆದರೆ, ಈ ಸಮಯ ಡ್ರೋನ್ ಹಾರುತ್ತಿರುವುದನ್ನು ನೋಡಿ ಎಚ್ಚೆತ್ತ ಎಲ್ ಸಿಬಿ ಪೊಲೀಸರು ತಕ್ಷಣ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಬಿಡಿಡಿಎಸ್ ತಂಡವು ಡ್ರೋನ್ ನನ್ನು ಕೆಳಗಿಳಿಸಿ ಮೂವರನ್ನು ಬಂಧಿಸಿದ್ದಾರೆ.

Join Whatsapp