ಬೆಂಗಳೂರು: ಅಪೆಕ್ಸ್ ಬ್ಯಾಂಕ್‌ನಲ್ಲಿ ಸಾವಿರಾರು ಕೋಟಿ ರೂ.ಹಗರಣ ನಡೆದಿದೆ ಎಂದು ರಾಜ್ಯ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಹಗರಣಗಳ ಸರಣಿ ಧಾರಾವಾಹಿಯೇ ಕಾಂಗ್ರೆಸ್ ಸರ್ಕಾರ ಎಂದಿದೆ.
ವಾಲ್ಮೀಕಿ ನಿಗಮದಲ್ಲಿ ಹಗರಣವಾಯ್ತು, ಮುಡಾದಲ್ಲಿ ಹಗರಣವಾಯ್ತು, ಈಗ ಅಪೆಕ್ಸ್ ಬ್ಯಾಂಕ್ ನ ಸರದಿ.ಸಹಕಾರಿ ಸಚಿವ ಕೆ ಎನ್ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ನಲ್ಲಿ ₹2000 ಕೋಟಿಗೂ ಹೆಚ್ಚು ಹಗರಣ ನಡೆಸಿದ್ದು, ಹೈಕೋರ್ಟ್ ಈ ಸಂಬಂಧ ತನಿಖೆಗೆ ಆದೇಶಿಸಿದೆ ಎಂದು ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಬಹುಪಾಲು ಸಚಿವರು ಹಾಗೂ ಶಾಸಕರು ಪರಪ್ಪನ ಅಗ್ರಹಾರಕ್ಕೆ ತಾ ಮುಂದು ನಾ ಮುಂದು ಎಂಬ ರೇಸ್ ನಲ್ಲಿರುವುದು ಕರ್ನಾಟಕದ ದುರಂತ ಎಂದು ಹೇಳಿದೆ.