ಯಾಕಾದ್ರೂ ಹುಟ್ಟಿದೆ ಅಂತ ಅನಿಸ್ಬೇಕು, ಹಾಗೆ ಮಾಡ್ತೀನಿ, ಕೋಮು ಸಾಮರಸ್ಯ ಕದಡಿದರೆ ಕ್ಷಮೆ ಇಲ್ಲ: ರಾಮನಗರ SP ಖಡಕ್ ವಾರ್ನಿಂಗ್ !

Prasthutha|

ರಾಮನಗರ: ‘ಇದು ನಮ್ಮ ಜಿಲ್ಲೆ, ಇಲ್ಲಿ‌ ನಾವೆಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಇಲ್ಲಿನ ಕೋಮು ಸಾಮರಸ್ಯವನ್ನು ಕದಡಲು ಯಾರಾದರೂ ಪ್ರಯತ್ನ ಪಟ್ಟರೆ, ಜಿಲ್ಲೆಯ ಶಾಂತಿಯುತ ವಾತಾವರಣವನ್ನು ಯಾವನಾದ್ರೂ ಹಾಳು ಮಾಡಲು ಬಂದರೆ ಅವನಿಗೆ ಯಾಕಾದ್ರೂ ತಪ್ಪು ಮಾಡಿದೆವು, ಯಾಕಾದ್ರೂ ಹುಟ್ಟಿದೆ ಅಂತ ಅನಿಸ್ಬೇಕು, ಹಾಗೆ ಮಾಡ್ತೀನಿ’ ಎಂದು ರಾಮನಗರ ಎಸ್‌ಪಿ ಸಂತೋಷ್‌ ಬಾಬು ಖಡಕ್ ಎಚ್ಚರಿಕೆ ನೀಡಿದ್ದಾರೆ.

- Advertisement -

ಶಿರವಸ್ತ್ರ- ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ನಾನು ಇದೇ ಜಿಲ್ಲೆಯವನು, ಈ ಜಿಲ್ಲೆಯ ಬಗ್ಗೆ ನನಗೆ ಸಾಕಷ್ಟು ಹೆಮ್ಮೆ ಇದೆ. ಹಿಂದೂ, ಮುಸ್ಲಿಮರು ಇಲ್ಲಿ ತುಂಬಾ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕೋಮುಸಾಮರಸ್ಯವನ್ನು ಕದಡುವ ಹಾಗೂ ಅಕ್ರಮ ಚಟುವಟಿಕೆಗಳಿಗೆ ನನ್ನ ಬಳಿ ತಾಳ್ಮೆ ಇಲ್ಲ. ಧಮ್ ಇದ್ದರೆ ಯಾರಾದರೂ ಅಶಾಂತಿ ಮೂಡಿಸುವ ಪ್ರಯತ್ನ‌ ಮಾಡಿ ನೋಡೋಣ, ಯಾರ ಬಳಿಯಾದ್ರೂ ಹೇಳಿಸಿಕೊಂಡು ಬನ್ನಿ. ಯಾರನ್ನೂ ಬಿಡುವುದಿಲ್ಲ ಅಂತ ಎಸ್​ಪಿ ಸಂತೋಷ್ ಬಾಬು ಹೇಳಿದ್ದಾರೆ.



Join Whatsapp