ಮೊಟ್ಟೆ ಎಸೆದವರು ಕಾಂಗ್ರೆಸ್ಸಿಗರು: ಬಿಜೆಪಿ ಶಾಸಕ ರಂಜನ್

Prasthutha|

ಮಡಿಕೇರಿ: ಸಿದ್ದರಾಮಯ್ಯ ಮೇಲೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಪಕ್ಷದ ವ್ಯಕ್ತಿಯೇ ಹೊರತು ಬಿಜೆಪಿ ವ್ಯಕ್ತಿ ಅಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ.

- Advertisement -

ಕಾಂಗ್ರೆಸ್ ಅನಗತ್ಯವಾಗಿ ಬಿಜಿಪಿ ವಿರುದ್ದ ಆರೋಪ ಹೊರಿಸಿ ಪ್ರಚಾರ ಗಿಟ್ಟಿಸಲು ಮುಂದಾಗಿದೆ. ಮೊಟ್ಟೆ ಎಸೆದವನು ಕಾಂಗ್ರೆಸ್ ಪಕ್ಷದವನು ಎಂದು ಈಗಾಗಲೇ ಪೊಲೀಸ್ ತನಿಕೆಯಲ್ಲಿ ಕೂಡ ಗೊತ್ತಾಗಿದೆ ಎಂದು ರಂಜನ್ ಹೇಳಿದ್ದಾರೆ. ಟಿಪ್ಪು ಜಯಂತಿ ಮೂಲಕ ಹಿಂದೂಗಳ ಭಾವನೆಗಳನ್ನು ಕೆರಳಿಸಿದ ಕುಖ್ಯಾತಿ ಸಿದ್ದರಾಮಯ್ಯ ಅವರದ್ದಾಗಿದೆ. ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ಮನೆಮನೆಯಲ್ಲೂ ಆಕ್ರೋಶ ಇದೆ. ಹೀಗಿರುವಾಗ ಸಿದ್ದರಾಮಯ್ಯ ಕೊಡಗು ಭೇಟಿ ಸಂದರ್ಭ ಬಿಜೆಪಿ ವತಿಯಿಂದ ಪ್ರಜಾಪ್ರಭುತ್ವದ ಹಕ್ಕಿನ ರೀತಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಯಿತು. ಮೊಟ್ಟೆ ಎಸೆಯುವ ಕಾರ್ಯಕ್ಕೆ ಬಿಜೆಪಿ ಕಾರ್ಯಕರ್ತರು ಮುಂದಾಗಿಲ್ಲ ಎಂದು ಶಾಸಕ ರಂಜನ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.



Join Whatsapp