ಬಿಜೆಪಿ ಸರ್ಕಾರದ ವಿರುದ್ಧ ಧ್ವನಿಯೆತ್ತುವವರನ್ನು ಹತ್ತಿಕ್ಕಲಾಗುತ್ತಿದೆ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು

Prasthutha|

ಮೈಸೂರು: ಬಿಜೆಪಿ ಸರ್ಕಾರದ ವಿರುದ್ಧ ಧ್ವನಿಯೆತ್ತುವವರನ್ನು NIA ಅಧಿಕಾರಿಗಳನ್ನು ಛೂಬಿಟ್ಟು ಹತ್ತಿಕ್ಕಲಾಗುತ್ತಿದೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ

- Advertisement -

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಬಿಜೆಪಿ ಸರ್ಕಾರದ ಆಡಳಿತವನ್ನು ವೈಫಲ್ಯವನ್ನು ಮರೆಮಾಚಲು ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ’ನ ಕೆಲವು ಕಾರ್ಯಕರ್ತರ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಸ್ತವದಲ್ಲಿ ಎಸ್.ಡಿ.ಪಿ. ಐ ಕಾನೂನುಬದ್ಧವಾಗಿ ಮತ್ತು ಸಂವಿಧಾನದ ಆಶಯದಂತೆ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಪಿ.ಎಫ್.ಐ ಎಂಬ ಸಂಘಟನೆಯು ಹಲಾವಾರು ಸಮಾಜಮುಖಿ ಸೇವೆ ಮತ್ತು ಜನರ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಇವುಗಳ ಮೇಲೆ ದಾಳಿ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಯತ್ನಿಸುತ್ತಿದ್ದು, ಈ ನಡೆಯನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ NIA ಅಧಿಕಾರಿಗಳು ಪಿ.ಎಫ್.ಐ ಕಚೇರಿಗೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸುವ ಸಮನ್ಸ್ ಇಟ್ಟುಕೊಂಡು SDPI ದ.ಕ ಜಿಲ್ಲಾ ಕಚೇರಿಯ ದಾಳಿ ಮಾಡಿರುವುದು ಅಕ್ಷಮ್ಯ. ದಾಳಿಯ ನೆಪದಲ್ಲಿ ಮಧ್ಯರಾತ್ರಿ ಬಾಗಿಲು ಮುರಿದು ಒಳನುಗ್ಗಿರುವುದು ಖಂಡನೀಯ ಎಂದು ಅವರು ಗುಡುಗಿದರು.

- Advertisement -

ಪ್ರತಿಪಕ್ಷಗಳು ಮತ್ತು ಪ್ರತಿರೋಧ ಒಡ್ಡುವವರ ಮೇಲೆ ದಾಳಿ ಮಾಡುವ ಅಧಿಕಾರಿಗಳು ಬಿಜೆಪಿ ಮುಖಂಡರ ಮನೆಗಳ ಮೇಲೆ ಮತ್ತು ಕಚೇರಿಗಳ ಮೇಲೆ ಯಾಕೆ ದಾಳಿ ಮಾಡಿಲ್ಲ ಎಂದು ಪ್ರಶ್ನಿಸಿದರು. NIA ಅಧಿಕಾರಿಗಳ ಜನವಿರೋಧಿ ನೀತಿಯ ವಿರುದ್ಧ ನಾವು ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಎಚ್ಚ ರಿಸಿದರು.

ಎಸ್.ಡಿ.ಪಿ.ಐ ಪಕ್ಷವು ಶೋಷಿತರ ವಿರುದ್ಧ ಹೋರಾಡಿದ ಪರಿಣಾಮ ನಮ್ಮ ಮೇಲೆ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಮೈಸೂರು ಜಿಲ್ಲಾಧ್ಯಕ್ಷ ಅಶ್ಫಾಕುಲ್ಲಾ ಖಾನ್, ಕಾರ್ಯದರ್ಶಿ ಶಫೀ ಮುಹಮ್ಮದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Join Whatsapp