ಸರ್ವಾಧಿಕಾರ ವಿರೋಧಿಸುವವರು ಬನ್ನಿ: ವೇಣುಗೋಪಾಲ್ ಕಿಡಿ

Prasthutha|

ಬೆಂಗಳೂರು: ಕೆಲ ಪ್ರಾದೇಶಿಕ ಪಕ್ಷಗಳು ಕಳೆದ ಚುನಾವಣೆಯಲ್ಲಿ ತನ್ನ ನಿಲುವು ಏನು ಎಂಬುದನ್ನು ಸಾಬೀತು ಮಾಡಿವೆ ಎಂದು ಹೇಳುವ ಮುಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕಿಡಿಕಾರಿದ್ದಾರೆ.

- Advertisement -


ಬಿಜೆಪಿ ಜೊತೆ ಹೆಚ್ ಡಿಕೆ ದೋಸ್ತಿ ಫಿಕ್ಸ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಜೆಡಿಎಸ್ ಅನ್ನು ಕಳೆದ ಚುನಾವಣೆಯಲ್ಲೆ ನೋಡಿದ್ದೇವೆ ಅವರು ಯಾವ ಫ್ಲಾಟ್ ಫಾರಂ ನಲ್ಲಿ ಇದ್ದಾರೆ ಎಂದು. ಸೆಕ್ಯುಲರಿಸಂ ಮೇಲೆ ನಂಬಿಕೆ ಇರುವ ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ ಎಂದರು.


ಜೂನ್ 23 ರಂದು ಪಾಟ್ನಾದಲ್ಲಿ ಯಶಸ್ವಿ ಸಭೆ ನಡೆಸಿದ್ದೆವು. ಇದು ಅದರ ಮುಂದುವರಿದ ಭಾಗ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. 26 ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ಇಂದು ಸಂಜೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ನಾಯಕರಿಗೆ ಬೋಜನ ಕೂಟ ಏರ್ಪಡಿಸಿದ್ದಾರೆ ಎಂದು ಹೇಳಿದರು.



Join Whatsapp