ವಾಷಿಂಗ್ಟನ್: ಅಮೆರಿಕದಲ್ಲಿ 2020ರ ಜನಗಣತಿ ನಿನ್ನೆ ಪ್ರಕಟವಾಗಿದ್ದು, 1790ರ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬಿಳಿಯರ ಜನಸಂಖ್ಯೆ ಕುಸಿತ ಕಂಡಿದೆ.
ಹಿಸ್ಪಾನಿಕ್ ಅಲ್ಲದ ಬಿಳಿಯ ಜನಾಂಗದವರ ಸಂಖ್ಯೆ 19.17 ಕೋಟಿಯಲ್ಲಿ 51 ಲಕ್ಷ , ಅಂದರೆ 2.6 ಶೇಕಡಾ ಕುಸಿದಿರುವುದು ಕಂಡುಬಂದಿದೆ. ಬೇರಾವುದೆ ಜನ ವರ್ಗದ ಜನಸಂಖ್ಯೆಯಲ್ಲಿ ಈ ಕುಸಿತ ಕಂಡುಬಂದಿಲ್ಲ.
ಅದೇ ವೇಳೆ ಬಿಳಿಯರ ಜನಸಂಖ್ಯೆಯು 2010ರ ಜನಗಣತಿಯಲ್ಲಿ 63.7% ಇದ್ದುದು, 2020ರ ಜನಗಣತಿಯಲ್ಲಿ 57.8%ಕ್ಕೆ ಇಳಿದಿದೆ. ಬಿಳಿಯರ ಪ್ರಮಾಣ 60%ಕ್ಕಿಂತ ಕೆಳಗಿಳಿದದ್ದು ಇದೇ ಮೊದಲು ಎಂದು ಅಂಕಿ ಅಂಶ ತಿಳಿಸಿದೆ.
ಕಳೆದ ದಶಕದಲ್ಲಿ ದಕ್ಷಿಣ ಅಮೆರಿಕ ಖಂಡದಿಂದ ಹಾಗೂ ಇತರ ಕಡೆಗಳಿಂದ ಯುಎಸ್ ಎಗೆ ಜನರು ನುಸುಳಿ ಬಂದಿರುವುದು ಬಿಳಿಯರ ಪ್ರಮಾಣವನ್ನು ಕಡಿಮೆ ಮಾಡಿದ್ದರೆ, ನಾನ್ ಹಿಸ್ಪಾನಿಕ್ ಬಿಳಿಯರಲ್ಲಿ ವಂಶ ವೃದ್ಧಿ ಮಿತಿ ಅತಿಯಾಗಿರುವುದು ಸಹ ಬಿಳಿ ಜನರ ಪ್ರಮಾಣವು ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ.
1790ರ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಕುಸಿದ ಬಿಳಿಯರ ಜನಸಂಖ್ಯೆ
Prasthutha|