ದೇಶದಲ್ಲಿ ಇದೇ ಮೊದಲ ಬಾರಿಗೆ ಪುರುಷರನ್ನು ಹಿಂದಿಕ್ಕಿದ ಸ್ತ್ರೀಯರು !

Prasthutha|

ಹೊಸದಿಲ್ಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದ್ದು, ಶಿಶು ಜನನ ದರವೂ ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಮಾಹಿತಿ ನೀಡಿದೆ.

- Advertisement -

ಆರೋಗ್ಯ ಇಲಾಖೆಯು ಗುರುವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಈಗ ಪ್ರತೀ 1000 ಪುರುಷರಿಗೆ 1,020 ಮಹಿಳೆಯರಿದ್ದಾರೆ. 1876ರಲ್ಲಿ ನಡೆದ ಮೊದಲ ರಾಷ್ಟ್ರೀಯ ಜನಗಣತಿಯ ಬಳಿಕ ಸರಕಾರಿ ಅಂಕಿಅಂಶವೊಂದು ಮಹಿಳೆಯರ ಸಂಖ್ಯೆ ಹೆಚ್ಚಿರುವುದನ್ನು ದಾಖಲಿಸಿರುವುದು ಇದೇ ಪ್ರಥಮ ಎಂದು ಹೇಳಲಾಗಿದೆ.

ಲಿಂಗಾನುಪಾತದಲ್ಲಿ ಆಗಿರುವ ಈ ಬದಲಾವಣೆ ಧನಾತ್ಮಕವಾಗಿದೆ ಮತ್ತು ಸರಿಯಾದ ದಿಕ್ಕಿನಲ್ಲಿದೆ. ಆದರೆ ಲಿಂಗ ಸಮಾನತೆಯ ವಿಚಾರದಲ್ಲಿ ಸಾಧಿಸಬೇಕಾದದ್ದು ಇನ್ನೂ ಸಾಕಷ್ಟಿದೆ ಎಂದು ಭಾರತೀಯ ಜನಸಂಖ್ಯಾ ಪ್ರತಿಷ್ಠಾನದ ಆರೋಗ್ಯ ವಿಜ್ಞಾನಿ ಸಂಘಮಿತ್ರ ಸಿಂಗ್ ಹೇಳಿದ್ದಾರೆ.



Join Whatsapp