ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅಲ್ಪಸಂಖ್ಯಾತ ವಿರೋಧಿ ಬಜೆಟ್, ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್ ನಲ್ಲಿ ಕೊಡುಗೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿಗೆ 30,000 ಕೋಟಿ ಎಂದು ಪ್ರಣಾಳಿಕೆಯಲ್ಲಿ ಇತ್ತು ಆದರೆ ಬಜೆಟ್ ನಲ್ಲಿ ಅದು ಕಾರ್ಯಗತವಾಗಿಲ್ಲ. ಮೇಕೆದಾಟುಗೆ 1000 ಕೋಟಿ ಇಟ್ಟಿದ್ದಾರೆ. ಮೇಕೆದಾಟು ಹೋರಾಟ ಮಾಡಿದ್ದೆವು ಅದಕ್ಕೆ 1000 ಕೋಟಿ ನೀಡಲಾಗಿದೆ. ಆದರೆ ಪರಿಸರ ಇಲಾಖೆ ಅನುಮತಿ ಪಡೆಯದಿದ್ದರೆ ಏನು ಪ್ರಯೋಜನ? ಎಂದು ಹೇಳಿದರು..
ಮಹದಾಯಿ ಹೋರಾಟದ ಬಗ್ಗೆ ಕಾಂಗ್ರೆಸ್ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಕಣ್ಣೊರೆಸುವ ಪ್ರಯತ್ನ ವಾಗಿ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ಕೊಟ್ಟಿಲ್ಲ. ಉಪ್ಪು ಹುಳಿ ಖಾರ ಇಲ್ಲದ ಬಜೆಟ್ ಯಾರಿಗೂ ಈ ಬಜೆಟ್ ಸಂತೋಷ ತಂದಿಲ್ಲ ಎಂದು ಈ ಸಂದರ್ಭದಲ್ಲಿ ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.