ಇದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ: ಕೇಂದ್ರದ ವಿರುದ್ಧ ರಾಬರ್ಟ್ ವಾದ್ರಾ ವಾಗ್ದಾಳಿ

Prasthutha|

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಾಗ್ದಾಳಿ ನಡೆಸಿದ್ದು, ರಾಜ್ಯಗಳಲ್ಲಿ ಸರಕಾರಗಳನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಚುನಾವಣಾ ಪ್ರಣಾಳಿಕೆಗಳಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಯಾಕೆಂದರೆ ಜನ ತಮ್ಮ ನಾಯಕರು ಅಭಿವೃದ್ಧಿ ಬಗ್ಗೆ ಮಾತನಾಡಲಿ, ಅಭಿವೃದ್ಧಿ ಮಾಡಲಿ ಎಂಬುದನ್ನಷ್ಟೇ ಬಯಸುತ್ತಾರೆ. ಕ್ಷುಲ್ಲಕ ವಿಚಾರಗಳು ಅವರಿಗೆ ಬೇಕಿಲ್ಲ ಎಂದು ವಾದ್ರಾ ಹೇಳಿದ್ದಾರೆ.

- Advertisement -

ನಮ್ಮ ಸರ್ಕಾರಗಳು ಇರುವಲ್ಲೆಲ್ಲಾ ಅವರು ಅವುಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರೆ. ಜನರು ಇದನ್ನು ಗಮನಿಸುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಯಾಕೆ ನಡೆಯುತ್ತಿದೆ ಎಂದುಬು ಜನರಿಗೆ ತಿಳಿದಿದೆ. ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವುದನ್ನು ಜನರು ಮೆಚ್ಚುವುದಿಲ್ಲ ಎಂದು ವಾದ್ರಾ ಹೇಳಿದ್ದಾರೆ.

Join Whatsapp