ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ‘ಎನ್ಡಿಎ’ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟಗಳು ಸಿದ್ಧತೆ ನಡೆಸುತ್ತಿವೆ.
ಈ ಬೆನ್ನಲ್ಲೇ ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ರಾಜ್ಯ ಬಿಜೆಪಿ ‘ಇದು INDIA ಅಲ್ಲ, ಇಟಲಿಯ Eat INDIA ಕಂಪೆನಿ’ ಎಂದು ಟ್ವೀಟ್ ಮಾಡಿದೆ.
‘ಎನ್ಡಿಎ’ ಮೈತ್ರಿಕೂಟ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷ, ‘ಆಲಿಬಾಬ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಇದು ಢೋಂಗಿ ಬಾಬ ಮತ್ತು 38 ಕಳ್ಳರ ಗುಂಪು. ಈ ಗುಂಪು ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ! ಇಡಿ – ಐಟಿ ಭಯದಿಂದ ಬಂದವರು ಇದ್ದಾರೆ! ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ ! ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ! ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ ! ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ, ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ ಬಿಜೆಪಿ ವಾಷಿಂಗ್ ಮಿಷನ್ ಪಕ್ಷ ಇದೆ’ ಎಂದು ತಿರುಗೇಟು ನೀಡಿದೆ.
ಆಲಿಬಾಬ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಇದು ಢೋಂಗಿ ಬಾಬ ಮತ್ತು ೩೮ ಕಳ್ಳರ ಗುಂಪು!
— AAP Bengaluru (@AAPBangalore) July 19, 2023
ಈ ಗುಂಪು ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ!
ಇಡಿ – ಐಟಿ ಭಯದಿಂದ ಬಂದವರು ಇದ್ದಾರೆ!
ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ !
ಎಲ್ಲಿ ಅಧಿಕಾರ ಇರುತ್ತೋ… pic.twitter.com/TvD0n8iUkB