ಉತ್ತರ ಪ್ರದೇಶದ ಗೋಶಾಲೆಯಲ್ಲಿ ಹಸಿವಿನಿಂದ ಸಾಯುತ್ತಿರುವ ಗೋವುಗಳು

Prasthutha|

ಉತ್ತರ ಪ್ರದೇಶ: ಉನ್ನಾವೋದಲ್ಲಿರುವ ಗೋಶಾಲೆಯೊಂದರಲ್ಲಿ ಗೋವುಗಳು ಹಸಿವಿನಿಂದ ಸತ್ತು ಬಿದ್ದಿರುವ ವೀಡಿಯೋ ವೈರಲ್ ಆಗಿದೆ. ‘ಅಮರ್ ಉಜಾಲಾ’ ಪತ್ರಕರ್ತ ಸೂರಜ್ ಶುಕ್ಲಾ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿರುವ ವೀಡಿಯೋ ಒಂದರಲ್ಲಿ ಉನ್ನಾವೋದ ಘನ ಘೋರ ಪರಿಸ್ಥಿತಿ ಬಯಲಾಗಿದೆ. ಗೋಶಾಲೆಯಲ್ಲಿ ಎಲ್ಲೆಂದರಲ್ಲಿ ಸತ್ತು ಬಿದ್ದಿರುವ ಗೋವುಗಳು ಕಾಣಸಿಗುತ್ತದೆ. ನೀರು ಮತ್ತು ಆಹಾರವಿಲ್ಲದೆ ಹಸುಗಳು ನೆಲದ ಮೇಲೆ ಬಿದ್ದಿರುವಂತಹಾ ಕರುಣಾಜನಕ ದೃಶ್ಯಗಳು ಗೋಚರಿಸುತ್ತಿದೆ.

- Advertisement -


ಗೋಹತ್ಯೆ ನೀಷೇಧದ ಬಳಿಕ ಎಲ್ಲೆಂದರಲ್ಲಿ ಬಿಡಾಡಿ ದನಗಳು ಕಂಡುಬರುತ್ತಿವೆ. ಗೋಹತ್ಯೆ , ಸಾಗಾಟದ ನೆಪದಲ್ಲಿ ಅದೆಷ್ಟೋ ಅಮಾಯಕರನ್ನು ಥಳಿಸಿ ಕೊಲ್ಲುವ ಸಂಘಟನೆಗಳು ಕೂಡಾ ಈ ಕುರಿತು ಮೌನ ತಾಳಿರುವುದು ಅವರ ದ್ವಂದ್ವ ನಿಲುವು ಮಗದೊಮ್ಮೆ ಬಟಾಬಯಲಾಗಿದೆ. ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸಿರುವ ಉತ್ತರ ಪ್ರದೇಶದಲ್ಲಿ ಗೋಶಾಲೆಗಳ ಇರುವ ಈ ಪರಿಸ್ಥಿತಿಗೆ ರಾಜ್ಯ ಬಿಜೆಪಿ ಸರಕಾರವೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp