ಮೈನ್’ಪುರಿ ಕ್ಷೇತ್ರದ ಉಪ ಚುನಾವಣೆ: ಮುಲಾಯಂ ಹೆಸರನಲ್ಲಿ ಮತಯಾಚಿಸಿದ ಡಿಂಪಲ್ ಯಾದವ್

Prasthutha|

ಮೈನ್’ಪುರಿ: ಸಮಾಜವಾದಿ ಪಕ್ಷದ ಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯು ಅವರಿಗೆ ಸೇರಿದ್ದಾಗಿದೆ ಎಂದು ಪಕ್ಷದ ಮೈನ್’ಪುರಿ ಕ್ಷೇತ್ರದ ಅಭ್ಯರ್ಥಿ, ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ತಿಳಿಸಿದ್ದಾರೆ.

- Advertisement -

ಚುನಾವಣಾ ಜಾಥಾಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕ್ಷೇತ್ರವು ದಿವಂಗತ ಮುಲಾಯಂ ಸಿಂಗ್ ಅವರದ್ದಾಗಿದ್ದು, ಜನರ ಬೆಂಬಲದೊಂದಿಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಬಿಜೆಪಿ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತಿದೆ ಮತ್ತು ಜನರನ್ನು ವಂಚಿಸುತ್ತಿದೆ. ಈ ಚುನಾವಣೆ ಮುಲಾಯಂ (ನೇತಾಜಿ) ಅವರ ಗೌರವಕ್ಕಾಗಿ ಮತ್ತು ನೀವೆಲ್ಲರೂ ಅವರನ್ನು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೇತಾಜಿ ಯಾವಾಗಲೂ ಎಲ್ಲರನ್ನೂ ಗೌರವಿಸುತ್ತಿದ್ದರು ಮತ್ತು ನಾವೆಲ್ಲರೂ ಅವರ ಆಲೋಚನೆ, ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಡಿಂಪಲ್ ಹೇಳಿರುವುದಾಗಿ ಮಾಧ್ಯಮಗಳು ತಿಳಿಸಿವೆ.

ಎಸ್ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದಾಗಿ ಮೈನ್’ಪುರಿ ಉಪಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ ಮತ್ತು ಮತದಾರರನ್ನು ಆಕರ್ಷಿಸಲು ಅಖಿಲೇಶ್ ಮುಲಾಯಂ ಅವರ ಪರಂಪರೆಯನ್ನು ಉಳಿಸುವಂತೆ ಮತದಾರರನ್ನು ಓಲೈಸುತ್ತಿದ್ದಾರೆ.

- Advertisement -

ಈ ಕೇತ್ರ ಮುಲಾಯಂ ಅವರ ಭದ್ರಕೋಟೆಯಾಗಿತ್ತು ಮತ್ತು ಅವರು ಐದು ಬಾರಿ (1996, 2004, 2009, 2014 ಮತ್ತು 2019) ಗೆಲುವು ಸಾಧಿಸಿದ್ದರು.



Join Whatsapp