ಆರೆಸ್ಸೆಸ್ ಶಾಖೆಯಲ್ಲಿ 13 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ!

Prasthutha|

ಪರಪ್ಪನಂಗಡಿ: ಕೇರಳದ ಪರಪ್ಪನಂಗಡಿಯ ಆರೆಸ್ಸೆಸ್ ಶಾಖೆಯಲ್ಲಿ 13 ವರ್ಷದ ಬಾಲಕನ ಮೇಲೆ ಶಾಖಾ ತರಬೇತುದಾರ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವರದಿಯಾಗಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಶಾಖಾ ತರಬೇತುದಾರನಾದ ವಾಕಯಿಲ್ ಶಿನೋಜ್ ವಿರುದ್ಧ ದೂರು ದಾಖಲಾಗಿದೆ.

ಶಾಖೆಗೆ ಹೋಗದ ಬಾಲಕನನ್ನು ಪ್ರಶ್ನಿಸಿದ ಪೋಷಕರಿಗೆ ಶಾಖಾ ತರಬೇತುದಾರ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿದ ವಿಷಯ ಬಹಿರಂಗವಾಗಿದೆ. ಘಟನೆ ಬೆಳಕಿಗೆ ಬಂದಾಗ ಸಂಬಂಧಿಕರು ತಕ್ಷಣ ಪರಪ್ಪನಂಗಡಿ ಸಿಐಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸದ ಪೋಲೀಸರು ಆರೆಸ್ಸೆಸ್ ನಾಯಕನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -


ಆತ ಇತರ ಮಕ್ಕಳ ಮೇಲೆಯೂ ಇದೇ ರೀತಿ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ಪೋಷಕರು ದೂರು ನೀಡಿದ್ದಾರೆ. ದೂರು ನೀಡಿದ್ದರೂ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇದೇ ಪ್ರದೇಶದಲ್ಲಿ ನಿನ್ನೆ ಹಿಂದುತ್ವವಾದಿಯೊಬ್ಬ ಮದ್ರಸಾ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಪೊಲೀಸರು ಆರೋಪಿಯನ್ನು ಮಾನಸಿಕ ಅಸ್ವಸ್ಥನೆಂದು ಪ್ರಕರಣ ದಾಖಲಿಸದೆ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.



Join Whatsapp