ಇನ್ನು ಮುಂದೆ ಮುಸ್ಲಿಮರನ್ನು ಕಣಕ್ಕೆ ಇಳಿಸುವ ಮೊದಲು ಆಲೋಚಿಸಬೇಕಾಗುತ್ತದೆ: ಮಾಯಾವತಿ

Prasthutha|

ಲಖನೌ: ಮುಸ್ಲಿಂ ಸಮುದಾಯದವರು ನಮ್ಮ ಪಕ್ಷವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇನ್ನು ಮುಂದೆ ಮುಸ್ಲಿಮರನ್ನು ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸುವ ಮೊದಲು ತುಂಬಾ ಆಲೋಚಿಸಬೇಕಾಗುತ್ತದೆ ಎಂದು ಎಂದು ಉ.ಪ್ರ. ಮಾಜಿ ಸಿಎಂ ಹಾಗೂ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

- Advertisement -

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅತ್ಯಧಿಕವಾದ 35 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಈ ಕುರಿತು ಮಾಯಾವತಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಮರಿಗೆ ಉತ್ತಮ ಪ್ರಾತಿನಿಧ್ಯ ನೀಡಿದ ಹೊರತಾಗಿಯೂ ಆ ಸಮುದಾಯದ ಮತದಾರರು ಬಿಎಸ್‌ಪಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ದಲಿತರು, ಅದರಲ್ಲೂ ಜಾಟವ ಸಮುದಾಯದವರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ಅವರಿಗೆ ಕೃತಜ್ಞಳಾಗಿದ್ದೇನೆ ಎಂದರು.

- Advertisement -

ಬಿಸಿಲು ಹೆಚ್ಚಾಗಿರುವ ಸಂದರ್ಭದಲ್ಲಿ ಹಾಗೂ ಏಳು ಹಂತಗಳಲ್ಲಿ ಮತದಾನ ನಡೆಸುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ಮೂರ್ನಾಲ್ಕು ಹಂತಗಳಲ್ಲೇ ಮತದಾನ ನಡೆಯಲು ಅವಕಾಶ ನೀಡಬೇಕು ಎಂದೂ ಪ್ರತಿಕ್ರಿಯಿಸಿದರು.



Join Whatsapp