ಚಿಕ್ಕೋಡಿ: ಗ್ಯಾಸ್ ಕಟರ್ ಬಳಸಿ ಎಸ್ ಬಿಐ ಎಟಿಎಂ ಕೊರೆದು ಲಕ್ಷಾಂತರ ರೂ. ಹಣ ದೋಚಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರ ಬಳಿ ಇರುವ ತಡರಾತ್ರಿ ನಡೆದಿದೆ.
ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಿಂದ ಎಸ್ ಬಿಐ ಎಟಿಂನಲ್ಲಿದ್ದ ಅಂದಾಜು 20 ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸದ್ಯ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು, ಎಫ್ಎಸ್ಎಲ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.