ರೋಹಿತ್ ವೇಮುಲ, ಚಂದ್ರಶೇಖರ್ ಆಝಾದ್ ಮಾದರಿಯಲ್ಲೇ ನನ್ನನ್ನು ಗುರಿಪಡಿಸಲಾಗುತ್ತಿದೆ: ಜಿಗ್ನೇಶ್ ಮೇವಾನಿ

Prasthutha|

ಗುವಾಹಟಿ: ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದು ಹೊರ ಬಂದ ಜಿಗ್ನೇಶ್ ಮೇವಾನಿ ಅವರನ್ನು ಕೆಲವೇ ಕ್ಷಣಗಳಲ್ಲಿ ಅಸ್ಸಾಮ್ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು ರೋಹಿತ್ ವೇಮುಲ, ಚಂದ್ರಶೇಖರ್ ಆಝಾದ್ ಬಳಿಕ ನನ್ನನು ಗುರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇದೀಗ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಜಿಗ್ನೇಶ್ ಮೇವಾನಿ ವಿರುದ್ಧ ಅಸ್ಸಾಮ್ ನ ಬಾರ್ಪೇಟಾ ಮತ್ತು ಗೋಲ್ ಪಾರಾದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿಸಲು ಪೊಲೀಸರು ಕೊಕ್ರಜಾರ್’ಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ಮೇವಾನಿ ಪರ ವಕೀಲ ಅಂಗ್ ಶುಮನ್ ಬೋರಾ, ಆತನ ವಿರುದ್ಧ ಎರಡು ಹೊಸ ಪ್ರಕರಣ ದಾಖಲಾಗಿರುವ ಕುರಿತು ಕೇಳಿದ್ದೇನೆ. ಇದು ನಡೆಯುತ್ತದೆ ಎಂದು ನನಗೆ ಮೊದಲೇ ತಿಳಿದಿದ್ದು, ನಾವು ಅದಕ್ಕೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.



Join Whatsapp