ಭಾರತ, ಚೀನಾ ಮಧ್ಯೆ ನೇರ ವಿಮಾನ ಸಂಚಾರ ಇರಬೇಕು: ಚೀನಾ ರಾಯಭಾರಿ

Prasthutha|

ಕೋಲ್ಕತ್ತಾ: ಭಾರತ ಮತ್ತು ಚೀನಾ ಮಧ್ಯೆ ನೇರ ವಿಮಾನಯಾನ ಆರಂಭವಾಗಬೇಕು ಮತ್ತು ಈ ನಿಟ್ಟಿನಲ್ಲಿ ಉಭಯ ದೇಶಗಳ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೋಲ್ಕತ್ತಾದಲ್ಲಿರುವ ಚೀನಾ ಕಾನ್ಸುಲ್ ಜನರಲ್ ಝಾ ಲಿಯು ತಿಳಿಸಿದ್ದಾರೆ.

- Advertisement -

2019ರ ಕೊನೆಯಲ್ಲಿ ವುಹಾನ್’ನಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಪ್ರಕರಣ ವರದಿಯಾದಾಗಿನಿಂದ ಎರಡು ರಾಷ್ಟ್ರಗಳ ನಡುವಿನ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿತ್ತು.

ಸುಮಾರು ಮೂರು ವರ್ಷಗಳ ಬಳಿಕ ಬೀಜಿಂಗ್ ಇತ್ತೀಚೆಗೆ ವೀಸಾ ನಿಷೇಧವನ್ನು ಹಿಂಪಡೆದಿದ್ದರೂ, ನೂರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ಚೀನಾದಲ್ಲಿ ಕೆಲಸ ಮಾಡುವ ಭಾರತೀಯರು, ಉದ್ಯಮಿಗಳ ಕುಟುಂಬಗಳಿಗೆ ಈ ಬದಲಾವಣೆಯು ಸವಾಲನ್ನು ತಂದಿಟ್ಟಿತ್ತು.

- Advertisement -

ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಸಂಪರ್ಕ ಪುನರಾರಂಭವಾಗಬೇಕು ಮತ್ತು ಎರಡೂ ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹಲವಾರು ಭಾರತೀಯ ವಿದ್ಯಾರ್ಥಿಗಳು ಈಗ ಚೀನಾಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದು ಲಿಯು ಸುದ್ದಿಗಾರರಿಗೆ ತಿಳಿಸಿದರು.

ಸುಮಾರು 23,000 ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದವರು ಚೀನಾದ ಕೋವಿಡ್ ವೀಸಾ ನಿಷೇಧಗಳಿಂದಾಗಿ ಸ್ವದೇಶಕ್ಕೆ ಮರಳಿದ್ದು, ಇದೀಗ ತಮ್ಮ ಕಾಲೇಜುಗಳಿಗೆ ಮರು ಸೇರ್ಪಡೆಯಾಗಲು ಚೀನಾ ಪ್ರಯಾಣಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದರೆ ನೇರ ವಿಮಾನಗಳ ಕೊರತೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಸದ್ಯ ಭಾರತೀಯ ಪ್ರಯಾಣಿಕರು ಶ್ರೀಲಂಕಾ, ನೇಪಾಳ ಮತ್ತು ಮ್ಯಾನ್ಮಾರ್ ಮೂಲಕ ಚೀನಾಕ್ಕೆ ಪ್ರಯಾಣಿಸುತ್ತಿದ್ದು, ವಿಮಾನ ಪ್ರಯಾಣಕ್ಕಾಗಿ ಹೆಚ್ಚಿನ ಹಣವನ್ನು ವ್ಯಯಿಸುತ್ತಿದ್ದಾರೆ. ಸೀಮಿತ ವಿಮಾನ ಸೇವೆಗಳನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಹಲವಾರು ತಿಂಗಳುಗಳಿಂದ ಮಾತುಕತೆ ನಡೆಸುತ್ತಿದ್ದು, ಆದರೆ ಮಾತುಕತೆ ನಿರೀಕ್ಷಿತ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿಲ್ಲ.

Join Whatsapp