ಇನ್ಮುಂದೆ ಕರ್ನಾಟಕದಲ್ಲಿ ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಇಲ್ಲ!

Prasthutha|

ಬೆಂಗಳೂರು : ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಎಂಬ ಹೆಸರು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಎಂದು ಮರು ನಾಮಕರಣ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯೇ ಬದಲಾವಣೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದ್ದು ಅದರ ಪೂರ್ವಭಾವಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರು ಸಹ ಬದಲಾವಣೆ ಮಾಡಲು ಸರಕಾರ ತಯಾರಾಗಿದೆ ಎಂದು ತಿಳಿದು ಬಂದಿದೆ.

- Advertisement -

ಬ್ರಿಟಿಷರ ಕಾಲದ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ನಾಮಕರಣ ಮಾಡಿದ್ದು ಅಂದಿನಿಂದ ಇಂದಿನವರೆಗೂ ಸಾರ್ವನಿಕ ಶಿಕ್ಷಣ ಇಲಾಖೆ ಎಂದೇ ಕರೆಯಲಾಗುತ್ತಿದೆ. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ಎಂಬ ಹೆಸರನ್ನು ತೆಗೆದು ಹಾಕಿ ಶಾಲಾ ಶಿಕ್ಷಣ ಎಂದು ಬದಲಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ವೆಬ್ ಸೈಟ್ ಸ್ಕೂಲ್ ಎಜುಕೇಶನ್ (www. Schooleduction.kar.in) ಎಂಬ ಹೆಸರಿನಲ್ಲಿಯೇ ಇರುವ ಕಾರಣ ಶಾಲಾ ಶಿಕ್ಷಣ ಎಂಬ ಹೆಸರು ಬಳಕೆಗೆ ಬಂದ ಸಂದರ್ಭದಲ್ಲಿ ವೆಬ್ ಸೈಟ್ ಹೆಸರು ಬದಲಾಯಿಸುವ ಪ್ರಮೇಯ ಬರುವುದಿಲ್ಲ ಎನ್ನಲಾಗಿದೆ.



Join Whatsapp