ಕಾಂಗ್ರೆಸ್ ನಲ್ಲಿ ಅಧ್ಯಕ್ಷರಿಲ್ಲ, ಯಾರು ನಿರ್ಧಾರ ತೆಗೆಯುತ್ತಾರೆ ಎಂದು ಗೊತ್ತಾಗುತ್ತಿಲ್ಲ । ಪಂಜಾಬ್ ಬಿಕ್ಕಟ್ಟಿನ ನಡುವೆ ಕಪಿಲ್ ಸಿಬಲ್

Prasthutha|

ಭೋಪಾಲ್: ಕಾಂಗ್ರೆಸ್ ನಲ್ಲಿ ಅಧ್ಯಕ್ಷರೇ ಇಲ್ಲ. ಕಾಂಗ್ರೆಸ್ ಪಕ್ಷದೊಳಗೆ ಯಾರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬುವುದರ ಬಗ್ಗೆ ಸ್ಪಷ್ಟತೆಯಿಲ್ಲ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ತಿಳಿಸಿದ್ದಾರೆ.

- Advertisement -

ಪಂಜಾಬ್ ಕಾಂಗ್ರೆಸ್ ನ ಮುಖ್ಯಸ್ಥ ನವಜೋತ್ ಸಿಧು ನೇಮಕದ ಎರಡು ತಿಂಗಳ ನಂತರ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವುದು ದುರಂತ ಬೆಳವಣಿಗೆ ಅವರು ತಿಳಿಸಿದರು.

ದೆಹಲಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿವ ಸಿಬಲ್ , ನಮ್ಮ ಪಕ್ಷದಲ್ಲಿ ಅಧ್ಯಕ್ಷರಿಲ್ಲ. ಹಾಗಾಗಿ ಯಾರು ನಿರ್ಧಾರಗಳನ್ನು ತೆಗೆಯುತ್ತಾರೆ ಎಂಬುವುದರ ಬಗ್ಗೆ ಗೊಂದಲವಿದೆ ಎಂದು ತಿಳಿಸಿದರು.

- Advertisement -

ಪ್ರಸಕ್ತ ಕಾಂಗ್ರೆಸ್ ಪಕ್ಷ ಪೂರ್ಣಾವಧಿ ಅಧ್ಯಕ್ಷರ ಕೊರತೆಯನ್ನು ಎದುರಿಸುತ್ತಿದೆ, ಸೋನಿಯಾ ಗಾಂಧಿ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ನಾಯಕತ್ವವನ್ನು ಕಂಡುಕೊಳ್ಳಲಿ ಎಂದು ಹೈಕಮಾಂಡ್ ಗೆ ಸಲಹೆ ನೀಡಿದರು.

Join Whatsapp