ದೆಹಲಿಯ ಪ್ರಧಾನಿಯನ್ನು ಶ್ರದ್ಧಾ ಕೇಂದ್ರಗಳ ಎದುರಿಗೆ ಕರೆದರೆ ಫಲವಿಲ್ಲ, ಬಿಜೆಪಿ ಪುಂಡರು ಅರಿಯಲಿ: ಕೆ.ಅಶ್ರಫ್

Prasthutha|

ಮಂಗಳೂರು: ದೆಹಲಿಯ ಪ್ರಧಾನಿಯನ್ನು ಶ್ರದ್ಧಾ ಕೇಂದ್ರಗಳ ಎದುರಿಗೆ ಕರೆದರೆ ಫಲವಿಲ್ಲ, ಬಿಜೆಪಿ ಪುಂಡರು ಅರಿಯಲಿ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಇತ್ತೀಚೆಗೆ ಜಿಲ್ಲೆಯ ವಿವಿಧ ಮಸೀದಿಗಳ ಎದುರಿಗೆ ಬಿಜೆಪಿಯ ವಿಜಯೋತ್ಸವದ ನೆಪದಲ್ಲಿ ಬಿಜೆಪಿಯ ಪುಂಡರು ಘೋಷಣೆಯ ಮೂಲಕ ಮಸೀದಿ ಚರ್ಚ್ ಗಳ ಎದುರಿಗೆ ಪ್ರಚೋದನಕಾರಿಯಾಗಿ ಮೋದಿ ಹೆಸರನ್ನು ಕೂಗಿ ಕರೆದರೆ, ದೆಹಲಿಯಲ್ಲಿರುವ ಪ್ರಧಾನಿ ಮೋದಿಯವರ ಕಿವಿಗೆ ಎಲ್ಲಿ ಕೇಳಿಸುತ್ತದೆ ! . ಈ ಬಗ್ಗೆ ಬಿಜೆಪಿಯ ನಾಯಕರು ಅವರ ಪುಂಡ ಕೂಟಕ್ಕೆ ಕೇಳಬೇಕಿದೆ. ಮಸೀದಿ ಪ್ರಾರ್ಥನಾ ಮಂದಿರಗಳ ಎದುರಿಗೆ ಮೋದಿಯನ್ನು ಕರೆದರೆ  ಯಾವುದೇ ಪ್ರಧಾನಿ ಉತ್ತರಿಸುವಂತಿಲ್ಲ, ಅದರ ಬದಲಾಗಿ ಮಸೀದಿ ಚರ್ಚ್ ಗಳ ಎದುರಿಗೆ ಬೊಬ್ಬಿರಿಸಿ ಇತರರಿಗೆ ಪ್ರಚೋದನೆ ಆಗುವ ರೀತಿಯಲ್ಲಿ ಕೂಗಿದರೆ, ಮೋದಿ ಬದಲಿಗೆ ಸ್ಥಳೀಯ ಮೊಯ್ದು ಗಳು ಬಂದು ಕರೆದವರನ್ನು ಸತ್ಕಾರ ಮಾಡುವಂತಾಗುತ್ತದೆ. ಈ ಬಗ್ಗೆ ಬಿಜೆಪಿಯ ಪುಂಡರಿಗೆ ಅವರ ನಾಯಕರು ತಿಳಿ ಹೇಳಲಿ. ಮಸೀದಿಯನ್ನು ಗುರಿ ಮಾಡಿಸಿ ವಿಕೃತಿ ಮೆರೆದರೆ ಪರಿಣಾಮ ವ್ಯತ್ಯಯವಾಗುತ್ತದೆ ಎಂದು ಹೇಳಿದ್ದಾರೆ.

Join Whatsapp