ಜಾತಿ ಗಣತಿ ಸಂಬಂಧವಾಗಿ ಅಮಿತ್‌ ಶಾ ಮಾತಲ್ಲಿ ತರ್ಕವಿಲ್ಲ: ಬಿಹಾರ ಸರ್ಕಾರ

Prasthutha|

ಪಾಟ್ನಾ: ಬಿಹಾರ ಸರ್ಕಾರ ಬಿಡುಗಡೆ ಮಾಡಿರುವ ಜಾತಿ ಗಣತಿ ವರದಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ತರ್ಕವಿಲ್ಲ ಎಂದು ಆಡಳಿತಾರೂಢ ಜೆಡಿಯು ತಿರುಗೇಟು ನೀಡಿದೆ. ಶಾ ಅವರ ಮಾತು ಅವರ ಹುದ್ದೆಗೆ ತಕ್ಕುದಾದುದಲ್ಲ ಎಂದೂ ಜೆಡಿಯು ಹೇಳಿದೆ.

- Advertisement -

ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಬೇಕೆಂದೇ ಹೆಚ್ಚು ತೋರಿಸಲಾಗಿದೆ, ಓಲೈಕೆ ರಾಜಕಾರಣದಿಂದಾಗಿ ಹೀಗೆ ಸರ್ಕಾರ ಮಾಡಿದೆ‌. ಇದರಿಂದ ಇತರ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಅಮಿತ್‌ ಶಾ ಮುಝಫ್ಫರಪುರದಲ್ಲಿ ರವಿವಾರ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿದ ಬಿಹಾರದ ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಕುಮಾರ್‌ ಚೌಧರಿ, ಯಾದವರು ಒಬಿಸಿ ವರ್ಗಕ್ಕೇ ಸೇರಿದವರು ಎಂಬುದು ಎಲ್ಲರಿಗೂ ತಿಳಿಸಿದೆ. ಒಬಿಸಿ ವರ್ಗಗಳಿಗೆ ಅನ್ಯಾಯ ಮಾಡಲು ಯಾದವರ ಜನಸಂಖ್ಯೆಯನ್ನು ಹೆಚ್ಚು ತೋರಿಸಲಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ’ ಎಂದು ಹೇಳಿದ್ದಾರೆ.

- Advertisement -

ಯಾವ ಆಧಾರದಲ್ಲಿ ಈ ಆರೋಪವನ್ನು ಕೇಂದ್ರ ಗೃಹ ಸಚಿವರು ಮಾಡಿದ್ದಾರೆಂದು ಸ್ಪಷ್ಟಪಡಿಸಬೇಕು. ಸರ್ಕಾರ ಬಿಡುಗಡೆ ಮಾಡಿರುವ ಜಾತಿ ಗಣತಿ ದತ್ತಾಂಶವು ನಿಖರವಾಗಿಲ್ಲ ಎಂದು ಅವರು ಹೇಳುವುದಾದರೆ, ನಿಖರವಾದ ದತ್ತಾಂಶವನ್ನು ಅವರೇ ಬಿಡುಗಡೆ ಮಾಡಲಿ ಎಂದೂ ಸಚಿವ ವಿಜಯ್‌ ಕುಮಾರ್‌ ಚೌಧರಿ ಹೇಳಿದ್ದಾರೆ‌.

Join Whatsapp