“ಪಿಎಫ್ಐ ವೆಬ್ ಸೈಟ್ ನಲ್ಲಿ ಉಗ್ರ ಸಿದ್ಧಾಂತ ಪ್ರತಿಪಾದಿಸುವ ಯಾವುದೇ ಸುಳಿವು ಇಲ್ಲ”

Prasthutha|

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಉಗ್ರಗಾಮಿ ಸಿದ್ಧಾಂತವನ್ನು ಅನುಸರಿಸುತ್ತಿತ್ತು ಹಾಗೂ ಅದನ್ನು ಪ್ರಚಾರ ಮಾಡುತ್ತಿತ್ತು ಎಂಬುದನ್ನು ನಿರೂಪಿಸಲು ಬೇಕಿರುವ ಸಣ್ಣ ಸುಳಿವೂ ವೆಬ್ ಸೈಟ್ ನಲ್ಲಿ ದೊರೆತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು “ಪ್ರಜಾವಾಣಿ” ವರದಿ ಮಾಡಿದೆ.

- Advertisement -

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆದೇಶದ ಮೇರೆಗೆ ಈ ವೆಬ್ ಸೈಟ್ ಅನ್ನು ಈಗಾಗಲೇ ರದ್ದುಪಡಿಸಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ಅದರ ಸಾಮಾಜಿಕ ಮಾಧ್ಯಮಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ತನಿಖಾಧಿಕಾರಿಗಳು ಸಂಘಟನೆಯ ವೆಬ್ ಸೈಟ್ ಅನ್ನು ಪರಿಶೀಲಿಸಿದ್ದು, ಅದರಲ್ಲಿ ಉಗ್ರ ಸಿದ್ಧಾಂತವನ್ನು ಪ್ರತಿಪಾದಿಸುವ ಯಾವುದೇ ಬರಹಗಳಾಗಲೀ, ಚಿತ್ರಗಳಾಗಲೀ ದೊರೆತಿಲ್ಲ ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.




Join Whatsapp