ಡಿಕೆಶಿ ಮಹಿಳೆಯ ಅಪಹರಿಸಿ ಬೆದರಿಸಿದ್ದಕ್ಕೆ ದಾಖಲೆ ಇದೆ: ಕುಮಾರಸ್ವಾಮಿ

Prasthutha|

ಬೆಂಗಳೂರು: ಡಿಕೆ ಶಿವಕುಮಾರ್ ಮಹಿಳೆಯನ್ನು ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಆ ಘಟನೆ ನಡೆದದ್ದು 1996-97 ರಲ್ಲಿ, ಅದರ ದಾಖಲೆಗಳಿವೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ಒಂದು ಮಗುವನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಏನು ಮಾಡಿದ್ದಿರಿ? ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜಮೀನು ಬರೆಸಿಕೊಳ್ಳಲು ಏನು ಮಾಡಿದ್ದಿರಿ? ಚೆಕ್ ಕೊಟ್ಟಿರುವುದು ಬೇಕಾ? ಚೆಕ್ ಡಿಸಾನರ್ ಮಾಡಿರುವ ದಾಖಲೆ ಇದೆ, ಎಲ್ಲ ಇಟ್ಟಿದ್ದೇವೆ. ನಿನ್ನೆ ಮೊದಲ ಬಾರಿಗೆ ಇದನ್ನ ಹೇಳಿದ್ದೆ. ಅದಕ್ಕೆ ಚರ್ಚೆಗೆ ಕರೆಯುತ್ತಾರೆ. ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ, ಕಂತೆ ಗಟ್ಟಲೇ ದಾಖಲೆ ಇಟ್ಟಿದ್ದೇನೆ. ದಾಖಲೆಗಳು ಬೇಕಾದಷ್ಟಿವೆ ಎಂದು ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದ್ದಾರೆ.


ಈಗ ಶಾಂತಿನಗರ ಹೌಸಿಂಗ್ ಸೊಸೈಟಿ, ಡೂಪ್ಲಿಕೇಟ್ ಸೊಸೈಟಿನ ಒರಿಜಿನಲ್ ಮಾಡಿಕೊಳ್ಳಲಿಲ್ವಾ? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನಲ್ಲಿ ಕೊಂಡುಕೊಂಡು ಯಾವಾಗ ಏನು ಬೇಕಾದ್ರು ಮಾಡುವ ವ್ಯಕ್ತಿ ಡಿಕೆ ಶಿವಕುಮಾರ್ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Join Whatsapp