ರಾಮಮಂದಿರ ಉದ್ಘಾಟನೆಯ ಹಿಂದಿದೆ ದೊಡ್ಡ ಪ್ಲ್ಯಾನ್: ಮಹುವಾ ಮೊಯಿತ್ರಾ

Prasthutha|

ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಿಲುಕಿ ಎಂಪಿ ಸ್ಥಾನದಿಂದ ವಜಾಕ್ಕೆ ಶಿಫಾರಸು ಕೂಡ ಮಾಡಲ್ಪಟ್ಟ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನೇ ಮಾಡಿದ್ದಾರೆ.

- Advertisement -

ಪ್ರಧಾನಿ ಮೋದಿ ಮತ್ತು ಗೌತಮ್ ಅದಾನಿ ವಿರುದ್ಧ ಮಾಡಿರುವ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ದ ಇವೆಲ್ಲವೂ ನಡೆಯುತ್ತಿದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಇನ್ನು ನನ್ನ ವಿರುದ್ಧ ನೀಡಲಾಗಿರುವ 500 ಪುಟಗಳ ವರದಿಯಲ್ಲಿ ಹಣದ ಬಗ್ಗೆ ಪ್ರಶ್ನೆಯೇ ಇಲ್ಲ. ಪ್ರಶ್ನೆ ಇರುವುದು ನಾವು ಪ್ರಶ್ನೆ ಮಾಡುತ್ತಿರುವ ಬಗ್ಗೆ ಎಂದಿದ್ದಾರೆ.

ಕಲ್ಲಿದ್ದಲು ಹಗರಣದ ಸರಿಯಾದ ತನಿಖೆ ನಡೆದರೆ ಮೋದಿ ಮತ್ತು ಅದಾನಿಗೆ ಮುಳುವಾಗಲಿದೆ. ಅದಕ್ಕೇ ಆ ಸಂಬಂಧವಾಗಿ ನಾವು ದನಿ ಎತ್ತದಂತೆ ಹೀಗೆಲ್ಲ ಮಾಡಲಾಗುತ್ತಿದೆ. ಜ. 22ರ ವರೆಗೆ ನಮ್ಮೆಲ್ಲರ ಬಾಯಿ ಮುಚ್ಚಿಸಲು ಈ ತಂತ್ರಗಳನ್ನು ಮಾಡಲಾಗುತ್ತಿದೆ. ಜ. 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗುತ್ತದೆ. ಆ ಬಳಿಕ ಅದೇ ಜೋಶ್​ನಲ್ಲಿ ಬಿಜೆಪಿ ಇದನ್ನೆಲ್ಲ ಮರೆಮಾಚುತ್ತದೆ. ಇದು ಅವರ ಪ್ಲ್ಯಾನ್ ಆಗಿದೆ. ರಾಮ ಮಂದಿರ ಉದ್ಘಾಟನೆ ಮೂಲಕ ಇವನ್ನೆಲ್ಲ ಮುಚ್ಚಿ ಹಾಕಲಾಗುತ್ತದೆ ಎಂದು ಮೊಯಿತ್ರಾ ಹೇಳಿದ್ದಾರೆ

Join Whatsapp