ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ

Prasthutha|

ನವದೆಹಲಿ: ಸಂಸತ್ ಭವನದ ಭದ್ರತಾ ವ್ಯವಸ್ಥೆ ವೈಫಲ್ಯದಲ್ಲಿ ನಿನ್ನೆ ಆತಂಕ ಸೃಷ್ಟಿಸುವ ಕೆಲಸ ನಡೆದಿದೆ. ಈ ಹಿನ್ನೆಲೆ ಯಲ್ಲಿ ಸಂಸತ್ತಿನ ಭದ್ರತೆಯಲ್ಲಿ ಬದಲಾವಣೆ ತರಲು ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಆರಂಭಿಸಿದ್ದಾರೆ. ಸಂಸದರಿಗೆ, ಸಂಸತ್ ಭವನದ ಸಿಬ್ಬಂದಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಕಲ್ಪಿಸುವ ತಯಾರಿ ನಡೆದಿದೆ.

- Advertisement -

ಸಂದರ್ಶಕರಿಗೆ ಸಂಸತ್ ಭವನ ಪ್ರವೇಶಿಸಲು ಅವಕಾಶ ನೀಡುವುದು ಆರಂಭವಾದ ನಂತರ, ಅವರು ನಾಲ್ಕನೆಯ ಗೇಟಿನಿಂದ ಒಳಗೆ ಬರುತ್ತಾರೆ. ಸದ್ಯ ಸಂದರ್ಶಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತವರು, ಸದನಕ್ಕೆ ನುಗ್ಗುವುದನ್ನು ತಡೆಯಲು, ಗ್ಯಾಲರಿಗೆ ಗಾಜಿನ ತಡೆಗೋಡೆ ಅಳವಡಿಸುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಗಳಲ್ಲಿ ಇರುವಂತ ದೇಹ ತಪಾಸಣಾ ಯಂತ್ರಗಳನ್ನು ಸಂಸತ್ ಭವನದಲ್ಲಿಯೂ ಅಳವಡಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

- Advertisement -

ಸಂಸತ್ ಭವನದಲ್ಲಿ ಇರುವ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ. ಸಂಸತ್ತಿಗೆ ಭೇಟಿ ನೀಡುವ ಸಂದರ್ಶಕರು ನಾಲ್ಕು ಹಂತಗಳ ತಪಾಸಣೆಗೆ ಒಳ‍‍‍ಪಡಬೇಕು. ಹಳೆಯ ಸಂಸತ್ ಭವನದಲ್ಲಿ ಭದ್ರತಾ ಸಿಬ್ಬಂದಿಯು ಸಂದರ್ಶಕರನ್ನು, ಅವರ ಭೇಟಿಯ ಅವಧಿ ಪೂರ್ಣಗೊಂಡಾಗ ಹೊರಗೆ ಕಳುಹಿಸುತ್ತಿದ್ದರು. ಆದರೆ, ಹೊಸ ಕಟ್ಟಡದಲ್ಲಿ ಅವರ ನಿಯೋಜನೆಯು ಕಡಿಮೆ ಇದೆ.



Join Whatsapp