ರಾಜ್ಯದಲ್ಲಿ 46,149 ರೌಡಿ ಶೀಟರ್‌ಗಳು ಇದ್ದಾರೆ: ಗೃಹ ಸಚಿವ ಪರಮೇಶ್ವರ್

Prasthutha|

ಬೆಂಗಳೂರು: ರಾಜ್ಯದಲ್ಲಿ 46,149 ರೌಡಿ ಶೀಟರ್ಗಳಿದ್ದು, 2018 ರಿಂದ 27,294 ಜನರ ಹೆಸರನ್ನು ರೌಡಿ ಶೀಟ್ನಿಂದ ಕೈಬಿಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

- Advertisement -

ಗುರುವಾರ ಪರಿಷತ್ ನಲ್ಲಿ ಎಂಎಲ್ ಸಿ ಅರವಿಂದಕುಮಾರ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವವರ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ. ಬಲಪ್ರಯೋಗದಿಂದ ಜನರಿಗೆ ಕಿರುಕುಳ ನೀಡುವುದು, ಹೊಲಸು ಭಾಷೆಯಲ್ಲಿ ಬೆದರಿಕೆ ಮತ್ತು ನಿಂದನೆ, ಬೆದರಿಸಿ ಸುಲಿಗೆ ಮಾಡುವವರು, ಅಸಭ್ಯ ವರ್ತನೆ, ಚೈನ್ ಸ್ನ್ಯಾಚಿಂಗ್, ಹಲ್ಲೆ ಮತ್ತು ಇತರ ಅಪರಾಧಗಳ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ ಎಂದರು.