ಮಾವನ ಅಸ್ಥಿಪಂಜರದಿಂದಲೇ ಗಿಟಾರ್ ತಯಾರಿಸಿದ ಯುವಕ

Prasthutha|

ಸಂಗೀತದ ಮೇಲಿನ ಅಪರಿಮಿತ ಪ್ರೇಮಕ್ಕೆ ಗೌರವ ಸೂಚಿಸುವ ಸಲುವಾಗಿ ತಯಾರಿಸಿದ ಗಿಟಾರ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಏಕೆಂದರೆ ಈ ಗಿಟಾರನ್ನು ಅಸ್ಥಿಪಂಜರದಿಂದ ತಯಾರಿಸಲಾಗಿದೆ. ಅಮೆರಿಕದ ಫ್ಲೋರಿಡಾ ಮೂಲದ ಪ್ರಿನ್ಸ್ ಮಿಡ್‌ನೈಟ್ ಎಂಬ ಗಿಟಾರ್ ವಾದಕ ಇಂತಹ ವಿಶಿಷ್ಟವಾದ ಗಿಟಾರ್ ಅನ್ನು ರಚಿಸಿದ್ದಾರೆ.

- Advertisement -

ಮಹಾನ್ ಸಂಗೀತ ಪ್ರೇಮಿಯಾಗಿದ್ದ ತನ್ನ ಮಾವ ಫಿಲಿಪ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ರೀತಿ ವಿನ್ಯಾಸಗೊಳಿಸಿರುವುದಾಗಿ ಪ್ರಿನ್ಸ್ ತಿಳಿಸಿದ್ದಾನೆ. 25 ವರ್ಷಗಳ ಹಿಂದೆ ನಿಧನರಾಗಿದ್ದ ಫಿಲಿಪ್ ಅವರ ಕೋರಿಕೆಯಂತೆ ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಬಿಟ್ಟುಕೊಡಲಾಗಿತ್ತು. ಆದರೆ ವರ್ಷಗಳ ನಂತರ ಫಿಲಿಪ್ ಅವರ ದೇಹವನ್ನು ಅಧ್ಯಯನಕ್ಕೆ ಬಳಸಲು ಸಾಧ್ಯವಾಗದೇ ಇರುವುದರಿಂದ ಕಾಲೇಜು ಆಡಳಿತವು ಅಸ್ಥಿಪಂಜರವನ್ನು ಸಂಬಂಧಿಕರಿಗೆ ಹಸ್ತಾಂತರಿಸಿತ್ತು.

ನಂತರ ಮಹಾನ್ ಸಂಗೀತ ಪ್ರೇಮಿಯಾಗಿದ್ದ ತನ್ನ ಮಾವ ಫಿಲಿಪ್‌ಗೆ ಗೌರವ ಸೂಚಕವಾಗಿ ಅವರ ಅಸ್ಥಿಪಂಜರದಿಂದಲೇ ಗಿಟಾರ್ ತಯಾರಿಸಲು ಪ್ರಿನ್ಸ್ ಯೋಚನೆ ಮಾಡಿದ್ದಾರೆ. ಇಬ್ಬರು ಸ್ನೇಹಿತರ ಸಹಾಯದಿಂದ ಪ್ರಿನ್ಸ್ ಈ ಗಿಟಾರ್ ನಿರ್ಮಿಸಿದ್ದಾರೆ. ಈ ಗಿಟಾರ್ ನೋಡುವವರಿಗೆಲ್ಲಾ ಆಕರ್ಷಕವಾಗಿದೆ.

Join Whatsapp