ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನ ಇಕೆ 562 ಶುಕ್ರವಾರದಂದು ಬಂದು ಇಳಿದಿದೆ.
ಇಂದು ಮಧ್ಯಾಹ್ನ 3.40ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಹಿಂತಿರುಗುವಾಗ ವಿಮಾನ ಸಂಖ್ಯೆ ಇಕೆ 562 ನಲ್ಲಿ ಪ್ರಯಾಣಿಕರು ಎ380 ನಲ್ಲಿ ಪ್ರಯಾಣಿಸುತ್ತಾರೆ. ಬೆಂಗಳೂರಿನಿಂದ ಸಂಜೆ 6.40 ಕ್ಕೆ (ಸ್ಥಳೀಯ ಸಮಯ) ದುಬೈಗೆ ರಾತ್ರಿ 9 ಗಂಟೆಗೆ (ಸ್ಥಳೀಯ ಸಮಯ) ತಲುಪುತ್ತಾರೆ.
ಜಂಬೋ ಜೆಟ್ ವಿಮಾನದ ಮೊದಲ ಹಾರಾಟವು ಅಕ್ಟೋಬರ್ 31 ರಂದು ಬೆಂಗಳೂರಿಗೆ ನಡೆಯಲಿದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ಮೊದಲೇ ಘೋಷಿಸಿತ್ತು. ಮೊದಲ ವಿಮಾನವು ಅಕ್ಟೋಬರ್ 30 ರಂದು ಸ್ಥಳೀಯ ಸಮಯ ರಾತ್ರಿ 9.25 ಕ್ಕೆ ದುಬೈನಿಂದ ಹೊರಟು ಅಕ್ಟೋಬರ್ 31 ರಂದು ಬೆಳಗ್ಗೆ 2.30 ಕ್ಕೆ ಬೆಂಗಳೂರಿಗೆ ಇಳಿಯಬೇಕಿತ್ತು. ಆದರೆ ಎರಡು ವಾರ ಮುಂಚೆಯೇ ಈ ಬೃಹತ್ ವಿಮಾನವು ಬೆಂಗಳೂರನ್ನು ತಲುಪಿದೆ.