ಬಾಗಲಕೋಟೆ: ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಕೊಡಿಸಿ ಅಂತ ಕೇಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಅಲ್ಲ. ನಮ್ಮಿಂದ ಹೋರಾಟ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ನೊಂದವರ ಬಗ್ಗೆ ಅನುಕಂಪ ತೋರಿಸಿ ವೈಯಕ್ತಿಕ ಸಹಾಯ ಮಾಡಲು ಮುಂದಾಗಿದ್ದರು. ಆ ಮಹಿಳೆ ಮೊದಲು ಬೇಡ ಎಂದು ನಿರಾಕರಿಸಿ ನಂತರ ಮನಬದಲಿಸಿ ಹಣ ಸ್ವೀಕರಿಸಿದ್ದಾರೆ. ಆ ಮಹಿಳೆ ಕೋಮುವಾದಿಗಳ ಪ್ರೇರಣೆಯಿಂದಾಗಿ ಮತ್ತು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಕೋಮುವಾದಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.