ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌, ವಫಾ ಎಂಟರ್‌ ಪ್ರೈಸಸ್ ವತಿಯಿಂದ ಜ.15ರಂದು ಬೃಹತ್ ರಕ್ತದಾನ ಶಿಬಿರ

Prasthutha|

ಮಂಗಳೂರು: ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ ನೇತೃತ್ವದಲ್ಲಿ ವಫಾ ಎಂಟರ್‌ ಪ್ರೈಸಸ್, ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟ ಇದರ ಅಶ್ರಯದಲ್ಲಿ  ಜನವರಿ 15ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಾಟಿಪಳ್ಳದ ಜಾಸ್ಮಿನ್ ಮಹಲ್ ಹಾಗೂ ಬಂದ‌ರ್ ಫ್ರೆಂಡ್ಸ್ ಮಂಗಳೂರು, ಇವರ ನೇತೃತೃದಲ್ಲಿ ಬಂದರು ಕಸಾಯಿಗಲ್ಲಿಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ  ಏಕಕಾಲದಲ್ಲಿ ಬೃಹತ್ ರಕ್ತದಾನ, ಅಂಗವಿಕಲರಿಗೆ  ಸಹಾಯಹಸ್ತ ಕಾರ್ಯಕ್ರಮ ನಡೆಯಲಿದೆ.

- Advertisement -

ಈ ಬಗ್ಗೆ ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೇ ಬರುವ ಫೆ.15ರಂದು ಬೆಂಗ್ರೆಯಲ್ಲಿ  ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ ಮತ್ತು ಕುರಾನ್ ದೀನ್ ಅಸೋಷಿಯೇಶನ್ ನೇತೃತ್ವದಲ್ಲಿ ರಕ್ತದಾನ ನಡೆಯಲಿದೆ ಎಂದರು.

- Advertisement -

ಈಗಾಗಲೇ ಈ ಸಂಸ್ಥೆಯು ಬಡ ಹೆಣ್ಣು ಮಕ್ಕಳ ಮದುವೆ ಸಹಿತ ನೆರವು ನೀಡುವಲ್ಲಿ ಸದಾ ಮುಂದಿದೆ. ಇದೀಗ ಮತ್ತೊಮ್ಮೆ ಅಶಕ್ತರ ನೆರವಿಗೆ ನಿಂತಿದೆ ಎಂದರು.

ಸಂಸ್ಥೆಯ ಪ್ರಮುಖರಾದ ರುಬಿಯಾ ಅಕ್ತರ್ ಮಾಹಿತಿ ನೀಡಿ, ರಕ್ತದಾನ ಶಿಬಿರಕ್ಕೆ ವೆನ್ ಲಾಕ್ ಹಾಗೂ ಕೆಎಂಸಿ ವೈದ್ಯರು ಸಹಕಾರ ನೀಡುತ್ತಿದ್ದಾರೆ. ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟ, ವಫಾ ಎಂಟರ್ ಪ್ರೈಸಸ್‌ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟ ವಫಾ ಎಂಟರ್ ಪ್ರೈಸಸ್ ಮತ್ತು ದಿ ವಾಟ್ಸ್ ಆಫ್‌ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹ ಭಾಗಿತ್ವದಲ್ಲಿ, ಸರಕಾರಿ ವೆನ್ಲಾಕ್ ಬ್ಲಡ್ ಬ್ಯಾಂಕ್ ಮಂಗಳೂರು, ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತ ದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ 3 ತಿಂಗಳ ಉಚಿತ ಡಯಾಲಿಸಿಸ್, ವಿಕಲ ಚೇತನರಿಗೆ ವೀಲ್ ಚೆಯರ್, ವಾಕರ್, ಮುಂತಾದ ಪರಿಕರಗಳ ವಿತರಣೆ ಹಾಗೂ ವಫಾ ಎಂಟರ್ಪ್ರೈಸಸ್ ನ ಮಾಸಿಕ ಸ್ಟೀಮ್ ಹಾಗೂ ವಿಶೇಷ ಲಕ್ಕೀ ಡ್ರಾ ದ ವಿಜೇತರಿಗೆ ನಿಗದಿತ ಸಾಮಗ್ರಿಗಳ ವಿತರಣೆ ನಡೆಯಲಿದೆ ಎಂದರು.

ಇದರ ಅಧ್ಯಕ್ಷ ಡಾ.ಓಸ್ವಾಲ್ಡ್  ಫುರ್ಟಾಡೋ ಮಾತನಾಡಿ, ನಮ್ಮ ಸಂಸ್ಥೆ ಹಾಗೂ ಲಯನ್ಸ್ ಕದ್ರಿ ವತಿಯಿಂದ ಕಳೆದ ಜ.3 ರಂದು ಇಬ್ಬರಿಗೆ ಕಣ್ಣು ದಾನ ನೀಡಿ ಬೆಳಕಾಗಿದ್ದೇವೆ. ಇದರ ವೆಚ್ಚ ಭರಿಸಿದ್ದೇವೆ. ಇದರ ಜತೆಗೆ ಕಳೆದ 6 ವರ್ಷಗಳಲ್ಲಿ ಸಂಸ್ಥೆ ರಕ್ತದಾನ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದೆ ಎಂದರು.

ಮಂಗಳೂರಿನ ದಿ ವಾಯ್ಸ್  ಆಫ್ ಬ್ಲಡ್ ಡೋನರ್ಸ್‌ ಮಂಗಳೂರಿನ ಸ್ಥಾಪಕಾಧ್ಯಕ್ಷ ರವೂಫ್ ಬಂದರ್, ಕುರಾನ್ ದೀನ್ ಇದರ ಅಧ್ಯಕ್ಷ ಎಂ.ಕೆ ಅಬ್ದುಲ್ ನಾಸೀರ್, ಬಂದರು ಫ್ರೆಂಡ್ಸ್ ಇದರ ಪ್ರಮುಖರಾದ ಜೆ.ಅಲ್ತಾಫ್, ಎಂ.ಕೆ ಫಯಾಝ್, ವುಮೆನ್ಸ್ ವಿಂಗ್ ನ ಆಲಿಶಾ ಅಮೀನ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp