‘ಮೇ ಮಧ್ಯದಲ್ಲಿ ಭಾರತದ ದೈನಂದಿನ ಸಾವಿನ ಸಂಖ್ಯೆ 5,600’ : ವಾಷಿಂಗ್ಟನ್ ವಿವಿ ಅಧ್ಯಯನ ವರದಿ

Prasthutha|

►ಆತಂಕಕಾರಿ ವರದಿ ಮಾಡಿದ ವಾಷಿಂಗ್ಟನ್ ವಿಶ್ವವಿದ್ಯಾನಿಲಯ

- Advertisement -

ಭಾರತದಲ್ಲಿ ದಿನಕ್ಕೆ ಕೋವಿಡ್ ಸಾವುಗಳ ಸಂಖ್ಯೆ ಮೇ ಮಧ್ಯದಲ್ಲಿ 5,600 ತಲುಪುವ ನಿರೀಕ್ಷೆಯಿದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವೆಲ್ಯುಷನ್ ನಡೆಸಿದ ಅಧ್ಯಯನ ವರದಿ ಮಾಡಿದೆ. 

ಕೋವಿಡ್‌ನ ಎರಡನೇ ಅಲೆ ನಿಧಾನವಾಗಿ ಭಾರತವನ್ನು ತಲುಪಿದ್ದರೂ, ದೇಶದಾದ್ಯಂತ ಮೊದಲನೆಯದಕ್ಕಿಂತ ಎರಡು ಪಟ್ಟು ಪ್ರಕರಣಗಳು ವರದಿಯಾಗುತ್ತಿದೆ. ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಮತ್ತು ಸಾವುಗಳಲ್ಲಿ ಭಾರಿ ಹೆಚ್ಚಳವಿದೆ.
ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಕಠಿಣವಾಗಲಿದೆ ಎಂದು ಅಧ್ಯಯನಗಳಿಂದ ವರದಿಯಾಗಿವೆ.

- Advertisement -

ಮುಂದಿನ ವಾರಗಳಲ್ಲಿ ಭಾರತದ ಪರಿಸ್ಥಿತಿ ಸಂಪುರ್ಣ ಹದಗೆಡಲಿದೆ ಎಂದು ಅಧ್ಯಯನ ಹೇಳುತ್ತದೆ.

ಏಪ್ರಿಲ್ 12 ಮತ್ತು ಆಗಸ್ಟ್ 1 ರ ನಡುವೆ ಕೋವಿಡ್‌ನಿಂದಾಗಿ ದೇಶದಲ್ಲಿ ಸುಮಾರು ಮೂರು ಲಕ್ಷ ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಜುಲೈ ಅಂತ್ಯದ ವೇಳೆಗೆ ಜಾಗತಿಕ ಸಾವಿನ ಸಂಖ್ಯೆ 6,65,000 ಕ್ಕೆ ಏರಲಿದೆ.

Join Whatsapp