ವಾಷಿಂಗ್ಟನ್ : ಉಕ್ರೇನ್ ಮೇಲೆ ರಷ್ಯಾ ಆಕ್ರಮಣವು ಕೆಲವೇ ದಿನಗಳಲ್ಲಿ ಪ್ರಾರಂಭವಾಗಬಹುದು, ಆದ್ದರಿಂದ ಮುಂದಿನ 48 ಗಂಟೆಗಳ ಒಳಗೆ ಅಲ್ಲಿರುವ ಅಮೇರಿಕನ್ನರು ದೇಶ ತೊರೆಯಬೇಕು ಎಂದು ಅಮೇರಿಕ ಸೂಚನೆ ನೀಡಿದೆ.
ಉಕ್ರೇನ್ ಮೇಲೆ 1ಲಕ್ಷಕ್ಕೂ ಅಧಿಕ ರಷ್ಯಾದ ಪಡೆಗಳು ದಾಳಿಗೆ ಸಜ್ಜಾಗಿದ್ದು, ಅಮೇರಿಕನ್ನರು ಅಲ್ಲಿಂದ ತಕ್ಷಣ ನಿರ್ಗಮಿಸಿ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಚೀನಾದಲ್ಲಿ ಬೀಜಿಂಗ್ ಒಲಿಂಪಿಕ್ಸ್ ಮುಗಿಯುವ ಮೊದಲು ಅಂತಹ ದಾಳಿಯು ಸಂಭವಿಸಬಹುದು ಎಂದು ಹೇಳಿರುವು ಅಚ್ಚರಿ ಮೂಡಿಸಿದೆ.