ಉಕ್ರೇನ್-ರಷ್ಯಾ ಯುದ್ಧ ಇಂದಿಗೆ ಒಂದು ತಿಂಗಳು; ರಷ್ಯಾ ವಿರುದ್ಧ ಪ್ರತಿಭಟನೆ ಮಾಡಲು ಉಕ್ರೇನ್ ಅಧ್ಯಕ್ಷ ಮನವಿ

Prasthutha|

ಕೀವ್: ಉಕ್ರೇನ್  ವಿರುದ್ಧ ರಷ್ಯಾ ಸೇನೆಯ ಭೀಕರ ದಾಳಿಯನ್ನು ಜಗತ್ತಿನಾದ್ಯಂತ  ಜನರೆಲ್ಲರೂ ಬೀದಿಗಿಳಿದು ಖಂಡಿಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.

- Advertisement -

ಉಕ್ರೇನ್ ನ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಝೆಲೆನ್ಸ್ಕಿ “ರಷ್ಯಾ ಸೇನೆಯ ಯುದ್ಧ ಉಕ್ರೇನ್ ಮೇಲೆ ಮಾತ್ರವಲ್ಲ, ಸ್ವಾತಂತ್ರ್ಯದ ವಿರುದ್ಧ ಯುದ್ಧವಾಗಿದೆ. ಆದ್ಧರಿಂದ ಈ ಯುದ್ಧವನ್ನು ಕೊನೆಗಾಣಿಸಲು ಇದರ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲಲೇಬೇಕು ಎಂದು ಕೇಳಿಕೊಂಡಿದ್ದಾರೆ. ಮಾರ್ಚ್ 24ಕ್ಕೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ.



Join Whatsapp