ಜಮ್ಮುವಿನಲ್ಲಿ ಬಂಧಿತ ಉಗ್ರ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ

Prasthutha|

- Advertisement -

ಕಾಶ್ಮೀರ: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ಬಂಧಿಸಿರುವ ಭಯೋತ್ಪಾದಕ ತಾಲಿಬ್ ಹುಸೇನ್, ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಎಂಬುದು ಬಹಿರಂಗವಾಗಿದೆ.


ಹಸೇನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿದ್ದು ಈ ಸಂಬಂಧ ಫೋಟೋಗಳನ್ನು ಬಿಡುಗಡೆ ಮಾಡಿದೆ. ಉಗ್ರನೊಬ್ಬನನ್ನು ಪಕ್ಷದಲ್ಲಿ ಸೇರಿಸಿಕೊಂಡಿರುವ ಬಿಜೆಪಿ ತನ್ನ ನಿಲುವಿನ ಬಗ್ಗೆ ದೇಶದ ಜನರಿಗೆ ಉತ್ತರಿಸಬೇಕು ಎಂದು ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ರವಿಂದರ್ ಶರ್ಮಾ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಶಂಕಿತ ಉಗ್ರ ಹುಸೇನ್ ರಔರಿ ಜಿಲ್ಲೆಯ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದು ಈತನನ್ನು ಭಾನುವಾರ ಪೊಲೀಸರು ಬಂಧಿಸಿದ್ದರು.

- Advertisement -


ಮೇ 9ರಂದು ನಡೆದ ಕಾರ್ಯಕ್ರಮ ವೊಂದರಲ್ಲಿ ಜಮ್ಮು-ಕಾಶ್ಮೀರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ರೈನಾ ಅವರು ಹುಸೇನ್ ಗೆ ಹೂ ಗುಚ್ಛ ನೀಡುತ್ತಿರುವ ಫೋಟೋ ಕಾಂಗ್ರೆಸ್ ಬಿಡುಗಡೆಮಾಡಿದೆ. ಇದಕ್ಕೂ ಮೊದಲು ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ನಯ್ಯ ಹತ್ಯೆ ಪ್ರಕರಣದ ಆರೋಪಿಗಳು ಕೂಡ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯರು ಮತ್ತು ಕಾರ್ಯಕರ್ತರು ಎಂಬುದು ಬೆಳಕಿಗೆ ಬಂದಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಾಲ್ಗೊಂಡ ಕಾರ್ಯಕ್ರಮದಲ್ಲಿಯೂ ಹುಸೇನ್ ನಿಂತಿರುವ ಚಿತ್ರವನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಬಂಧಿತ ಶಂಕಿತ ಉಗ್ರರಿಂದ 2 ಎಕೆ ರೈಫಲ್ ಗಳು, ಏಳು ಗ್ರೆನೇಡುಗಳು ಹಾಗೂ ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Join Whatsapp