ಬೆಂಗಳೂರು : ರಾಜ್ಯಸಭೆ ಎಲೆಕ್ಷನ್ಗೆ ರಣತಂತ್ರ ಪ್ರಾರಂಭ ಆಗಿದ್ದು, ಮತದಾನಕ್ಕೆ ಒಂದು ದಿನ ಮುನ್ನವೇ ಜೆಡಿಎಸ್ MLAಗಳನ್ನು ಹೋಟೇಲ್ ಗೆ ಶಿಫ್ಟ್ ಮಾಡಲಾಗಿದೆ. ಕಾಂಗ್ರೆಸ್, ಬಿಜೆಪಿ ಗಾಳಕ್ಕೆ ಬೀಳದಂತೆ ಪ್ಲಾನ್ ನಡೆಸಲಾಗಿದೆ.
ಜೆಡಿಎಸ್ ವಕ್ತಾರರು ಶಾಸಕರನ್ನು ಒಂದೆಡೆ ಕಲೆ ಹಾಕಿದ್ದು ಬೆಂಗಳೂರು ಹೊರವಲಯದ ತಾಜ್ ವಿವಾಂತಗೆ ಶಾಸಕರನ್ನು ಶಿಫ್ಟ್ ಮಾಡಿದ್ದಾರೆ. ಶಾಸಕರು ನಿನ್ನೆ ರಾತ್ರಿಯೇ ಹೋಟೆಲ್ಗೆ ಬಂದಿದ್ದು 32 ಶಾಸಕರ ಪೈಕಿ 25 ಶಾಸಕರು ಹೋಟೆಲ್ನಲ್ಲಿದ್ದಾರೆ.
ಇನ್ನುಳಿದ ಐವರು ಶಾಸಕರು. ಕೋಲಾರದ ಶ್ರೀನಿವಾಸಗೌಡ, ಗುಬ್ಬಿಯ ಶ್ರೀನಿವಾಸ್, ಚಾಮುಂಡೇಶ್ವರಿಯ ಜಿ.ಟಿ.ದೇವೇಗೌಡ, ಅರಸೀಕೆರೆಯ ಶಿವಲಿಂಗೇಗೌಡ, ತುಮಕೂರು ಗ್ರಾಮಾಂತರದ ಗೌರಿಶಂಕರ್ ಇನ್ನೂ ಬಂದಿಲ್ಲ. ಗೌರಿಶಂಕರ್ ಸಿಂಗಾಪುರದಿಂದ ವಾಪಸ್ ಬರುತ್ತಿದ್ದಾರೆ. ಉಳಿದ ನಾಲ್ವರು ಬರ್ತಾರೋ ಇಲ್ವೇ ಎಂಬುವುದು ಸಂಶಯವಾಗಿದೆ.
ಹೆಚ್ಡಿ ಕುಮಾರಸ್ವಾಮಿ ಇಂದು ಸಂಜೆ ಜೆಡಿಎಸ್ ಶಾಸಕಾಂಗ ಸಭೆ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕುಮಾರಸ್ವಾಮಿ ಅವರಿಗೆ ಸಾಥ್ ನೀಡಲಿದ್ದಾರೆ. ಪ್ರಾಶಸ್ತ್ಯದ ಮತಗಳ ಬಗ್ಗೆಯೂ ಸಂಜೆಯೇ ನಿರ್ಧಾರವಾಗುತ್ತದೆ.
ಒಟ್ಟಿನಲ್ಲಿ ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿ ರಾಜಕೀಯ ರಣತಂತ್ರ ಪ್ರಾರಂಭವಾಗಿದೆ