ಮನೆ ಬಿಟ್ಟಿದ್ದ ಗುಬ್ಬಿಗಳಿಗೆ ತಣ್ಣೀರುಬಾವಿಯಲ್ಲಿ ಮಹಡಿ ಮನೆ

Prasthutha|

ಮಂಗಳೂರು: ಗುಬ್ಬಿಗಳು ಏಷ್ಯಾ ಮತ್ತು ಯೂರೋಪಿನ ಎಲ್ಲ ಕಡೆ ಕಂಡು ಬರುತ್ತವೆ. ಹೌಸ್ ಸ್ಪ್ಯಾರೋ ಇಲ್ಲವೇ ಮನೆ ಗುಬ್ಬಿಗಳ ಹೊರತಾಗಿ ಬೇರೆಲ್ಲ ಜಾತಿಯ ಗುಬ್ಬಚ್ಚಿಗಳು ಕಾಡು ಹಕ್ಕಿಗಳೇ ಆಗಿವೆ.

- Advertisement -

ವನಚರಿ ಗುಬ್ಬಚ್ಚಿಗಳು ಸಹ ಕೆಲವು ಊರಿಗೆ ಹತ್ತಿರದಲ್ಲಿಯೇ ವಾಸಿಸುತ್ತವೆ. ಅಷ್ಟೆಲ್ಲ ಕಾಡಿನ ಗುಬ್ಬಿಗಳು ಇರುವಾಗ ಮನೆ ಗುಬ್ಬಿಗಳು ಹೇಗೆ ಮಾನವನನ್ನು ನಂಬಿ ವಿಶ್ವಾಸದಿಂದ ಬದುಕಿವೆ ಎನ್ನುವುದೇ ಅಚ್ಚರಿ. ಅದಕ್ಕೆ ಕಾರಣಗಳೂ ವಿಜ್ಞಾನಿಗಳಿಗೆ ಗೊತ್ತಾಗಿಲ್ಲ.

ಹಳೆಯ ಚೀನೀ ದಾಖಲೆ, ಹಲವು ನಾಗರಿಕತೆ ಹಾಗೂ ಬೈಬಲ್ ಮೊದಲಾದವುಗಳಲ್ಲೂ ಮನೆ ಗುಬ್ಬಿಗಳ ಪ್ರಸ್ತಾಪಗಳು ಇವೆ.

- Advertisement -

ಇವು ಬೀಜ ಪ್ರಸಾರದಲ್ಲಿ ಸಹಾಯಕ. ಕೀಟ ಹತೋಟಿಯಲ್ಲೂ ಪಾತ್ರ ಪಡೆದಿವೆ. ಗಿಡುಗ, ಗೂಬೆ, ಕಾಡು ಬೆಕ್ಕುಗಳಿಗೆ ಊರಿನವಕ್ಕೂ ಸೇರಿ ಗುಬ್ಬಿಗಳು ನಿಸರ್ಗದ ಆಹಾರ ಸರಪಣಿಯವಾಗಿವೆ.

ಚಿತ್ರದಲ್ಲಿ ಬಲ ತಣ್ಣೀರುಬಾವಿ ಬೀಚಿನ ಮನುಜ ನಿರ್ಮಿತ ಗೂಡಿನಲ್ಲಿ ಗುಬ್ಬಿ ಸಂಸಾರ ಇರುವುದನ್ನು ನೋಡಬಹುದು.



Join Whatsapp