ವಂಢೀಗಡ: ತಾನು ಕೇಳಿದ ಐದು ಸಾವಿರ ರೂಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಶವ ತುಂಡರಿಸಿ ಸೂಟುಕೇಸಲ್ಲಿ ತುಂಬಿಸಿಟ್ಟಿದ್ದ ಆಘಾತಕಾರಿ ಘಟನೆ ಹರಿಯಾಣದ ಹಿಸ್ಸಾರ್ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಹಿಮಾಂಶು ಬಂಧಿತ ವ್ಯಕ್ತಿ.
ಹೆತ್ತು ಹೊತ್ತು ಬೆಳೆಸಿದ ಮಗನಿಂದಲೇ ಕೊಲೆಯಾದ ಮಹಿಳೆಯನ್ನು ಪ್ರತಿಮಾ ದೇವಿ ಎಂದು ಗುರುತಿಸಲಾಗಿದ್ದು, ಆರೋಪಿ ಇವರ ಮೃತದೇಹವನ್ನು ಪ್ರಯಾಗ್ರಾಜ್ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಎಸೆಯಲು ಯತ್ನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಹಿಮಾಂಶು ಐಐಟಿ ಆಕಾಂಕ್ಷಿಯಾಗಿದ್ದು, ತನ್ನ ತಾಯಿಯೊಂದಿಗೆ ಹರಿಯಾಣದ ಹಿಸ್ಸಾರ್ನಲ್ಲಿ ನೆಲೆಸಿದ್ದ. ಆರೋಪಿ ತನ್ನ ತಾಯಿಯ ಬಳಿ 5 ಸಾವಿರ ರೂಪಾಯಿ ಹಣ ಕೇಳಿದ್ದು, ಇದಕ್ಕೆ ಅವರ ತಾಯಿ ಒಪ್ಪಿಲ್ಲ. ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ ಸಿಟ್ಟಿನಲ್ಲಿ ಅವರನ್ನು ಹತ್ಯೆ ಮಾಡಿದ್ದಾನೆ ಎಂದಿದ್ದಾರೆ.