ಊರಿಗೆ ಮನುಷ್ಯನಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬ ಪರಿಸ್ಥಿತಿ ಕಾಂಗ್ರೆಸ್’ನದ್ದು: ಸಚಿವ ಆರ್. ಆಶೋಕ್ ವ್ಯಂಗ್ಯ

Prasthutha|

ಮಂಗಳೂರು: ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ವಿಚಾರದ ಕುರಿತು ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಆಶೋಶ್, ಸದ್ಯ ಕಾಂಗ್ರೆಸ್’ ಊರಿಗೆ ಮನುಷ್ಯನಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬ ಪರಿಸ್ಥಿತಿಯಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಪರವಾಗಿದ್ದೇವೆ ಎಂದು ಹೇಳಲು ಡಿ.ಕೆ. ಶಿವಕುಮಾರ್ ತಯಾರಿಲ್ಲ. ಅದೇ ರೀತಿ ನಾವು ಹಿಂದೂಗಳ ಪರವಾಗಿದ್ದೇವೆ ಎಂದು ಹೇಳಲು ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲ. ಇದು ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಫೈಟ್ ಅಷ್ಟೇ ಎಂದು ಅವರು ಛೇಡಿಸಿದ್ದಾರೆ.
ವಿಧಾನಸಭೆ ಹಿಜಾಬ್ – ಕೇಸರಿ ಶಾಲಿನ ವಿವಾದದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಜನರ ಸಮಸ್ಯೆಯ ಕುರಿತು ಚರ್ಚೆ ಮಾಡುವುದಕ್ಕೆ ವಿಧಾನಸಭೆ ಕಲಾಪ ನಡೆಯುತ್ತದೆ. ಕಾಂಗ್ರೆಸ್ ನಿಂದಾಗಿ ಇದೀಗ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಅವರು ಆರೋಪಿಸಿದರು.

ಆ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಹೊಂದಿದೆಯೇ? ಎಲ್ಲಿದೆ ಕಾಳಜಿ, ಈ ಬಗ್ಗೆ ಚರ್ಚೆ ಮಾಡಬೇಕಿತ್ತಲ್ವಾ, ಯಾಕೆ ಮಾಡಲ್ಲ ಅಂದರೆ ಚರ್ಚೆ ಮಾಡಿದರೆ ಓಟು ಹೋಗುತ್ತದೆ ಎಂಬ ಭಯದಿಂದ ಈ ರೀತಿ ಮಾಡುತ್ತಿದೆ. ಓಟು ಹೋಗುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ತೀರ್ಮಾನಿಸಿದೆ. ಇದನ್ನು ಮರೆಮಾಚಲು ಕಾಂಗ್ರೆಸ್ ಈಶ್ವರಪ್ಪನವರ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಆಶೋಕ್ ಕಿಡಿಕಾರಿದರು.

- Advertisement -

ಇದರ ಹೊರತಾಗಿ ಕಾಂಗ್ರೆಸ್ ಗೆ ಬೇರೇನೂ ಉದ್ದೇಶವಿಲ್ಲ. ನಾವು ಈ ಹಿಂದೆ ರೈತರ ಬಗ್ಗೆ, ಬಡವರ ಪರವಾಗಿ ಹೋರಾಟ ನಡೆಸಿದ್ದೆವು. ಇದೀಗ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಡವರ ಬಗ್ಗೆ ಯಾವುದೇ ಪ್ರಶ್ನೆ ಎತ್ತಿಲ್ಲ. ಕಾಂಗ್ರೆಸ್ ನ ಸ್ವಾರ್ಥ, ಈಶ್ವರಪ್ಪ, ಡಿ.ಕೆ. ಶಿವಕುಮಾರ್ ಬಿಟ್ಟು ಬೇರೆ ಯಾವ ವಿಷಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ವಿಷಾದಿಸಿದರು.

ಒಂದು ಸದನಕ್ಕೆ ಪ್ರತಿ ದಿನ ಒಂದು ಕೋಟಿ ರೂ. ವ್ಯಯಿಸಲಾಗುತ್ತಿದ್ದು, ಜನರ ದುಡ್ಡು ಪಡೆದುಕೊಂಡು ವಿಧಾನಸೌಧದಲ್ಲಿ ಆರಾಮವಾಗಿ ನಿದ್ರೆ ಮಾಡಿದರೆ ಏನು ಸಿಗತ್ತದೆ. ಇದರಿಂದ ಜನರಿಗೆ ಮೋಸ ಮಾಡಿದಾಗೆ ಅಲ್ವಾ. ಕಾಂಗ್ರೆಸ್ ಅವರಿಗೆ ಬುದ್ದಿ, ಮಾನ ಮರ್ಯಾದೆ ಏನಾದರೂ ಇದ್ದರೆ ಜನರ ಸಮಸ್ಯೆ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು.

ಅದು ಬಿಟ್ಟು ಈಶ್ವರಪ್ಪ, ಡಿ.ಕೆ ಶಿವಕುಮಾರ್, ತೋಳು ಏರಿಸೋದು ಹೊಡೆದಾಡೋದು ಎಷ್ಟು ಸರಿ. ಇದಕ್ಕಾ ವಿಧಾನಸಭೆಗೆ ಬರೋದು. ಕೆಂಗಲ್ ಹನುಮಂತಯ್ಯ ವಿಧಾನಸೌಧ ಬಡವರಿಗೋಸ್ಕರ ಕಟ್ಟಿರೋದು. ಅದು ಬಿಟ್ಟು ಕುಸ್ತಿ ಆಡೋಕೆ ಅಲ್ಲ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ನವರು ಹಿಜಾಬ್, ಕೇಸರಿ ಬಗ್ಗೆ ನಿಲುವೇನು ಎಂದು ಬಹಿರಂಗಪಡಿಸಬೇಕು. ಲಕ್ಷಾಂತರ ಜನ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ತೆರಳಬೇಕು. ಶಾಲೆಗೆ ಹೋಗುವುದು ವಿದ್ಯಾಭ್ಯಾಸಕ್ಕೆ ಹೊರತು ಮತ ಪ್ರಚಾರಕ್ಕೆ ಅಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆ ವ್ಯವಸ್ಥೆಯನ್ನು ಕೊಡುವ ತೀರ್ಮಾನದ ವೇದಿಕೆ ವಿಧಾನಸಭೆ ಆಗಬೇಕು. ವಿಧಾನಸಭೆಗೆ ಅಗೌರವ ಕೊಡುವ ಕಾಂಗ್ರೆಸ್ ನ್ನು ಮುಂದಿನ ದಿನ ಜನ ರಾಜ್ಯದಿಂದ ಓಡಿಸುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.



Join Whatsapp