ಇಸ್ಲಾಮಾಬಾದ್ ; ಅತ್ಯಾಚಾರ ಕೃತ್ಯಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಸ್ತಾನ ಸಂಸತ್ ಇದೀಗ ಮುಂದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗುವವರಿಗೆ ಲೈಂಗಿಕ ಉತ್ಸಾಹವನ್ನೇ ಕುಂಠಿತ ಗೊಳಿಸುವ ಶಿಕ್ಷೆಗೆ ಗುರಿ ಪಡಿಸುವ ಮಸೂದೆಗೆ ಪಾಕ್ ಸಂಸತ್ ಅನುಮೋದನೆ ನೀಡಿದೆ.
ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ, ಸಾಕ್ಷ್ಯ ಸಂಗ್ರಹ, ವಿಚಾರಣೆ ಪೂರ್ಣ ಮತ್ತು ಲೈಂಗಿಕ ಶಕ್ತಿ ಕುಂಠಿತಗೊಳಿಸುವ ಶಿಕ್ಷೆ ಜಾರಿ ಸೇರಿದಂತೆ ಮಹತ್ವದ ಅಂಶಗಳನ್ನು ಒಳಗೊಂಡ ಮಸೂದೆಗೆ ಪಾಕ್ ಸಂಸತ್ ಬುಧವಾರ ಅಂಗೀಕಾರ ನೀಡಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥ ಕಠಿಣ ಮಸೂದೆಗೆ ಪಾಕ್ ಕೈಹಾಕಿದೆ.
ಕೆಲವೊಂದು ರಾಸಾಯನಿಕ ಬಳಸಿ ಇಂಜೆಕ್ಷನ್ ಮೂಲಕ ಈ ಶಿಕ್ಷೆ ಯನ್ನು ಜಾರಿಗೊಳಿಸಲಾಗುತ್ತದೆ. ಇದೀಗಾಗಲೇ ದಕ್ಷಿಣ ಕೊರಿಯಾ ಸೇರಿದಂತೆ ಪೊಲೆಂಡ್, ಅಮೆರಿಕಾದ ಕೆಲ ರಾಜ್ಯಗಳು ಜೆಕ್ರಿಲಪಬ್ಲಿಕ್ ಮತ್ತು ಮೊದಲಾದ ದೇಶಗಳಲ್ಲಿ ಈ ಶಿಕ್ಷೆಗಳು ಜಾರಿಯಲ್ಲಿದೆ.