ಮಡಿಕೇರಿ: ಕೊಡಗಿಗೂ ಕೇಸರಿ ಶಾಲು ವಿವಾದ ವ್ಯಾಪಿಸಿದ್ದು, ಮಡಿಕೇರಿಯ ಎಫ್ ಎಂಕೆಎಂಸಿ ಕಾಲೇಜು ಹಾಗೂ ಶನಿವಾರಸಂತೆಯ ಪ್ರಥಮ ದರ್ಜೆ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಹಿಂದೂ ವಿದ್ಯಾರ್ಥಿಗಳು, ಹಿಜಾಬ್ ಧರಿಸಿ ಶಾಲೆಗೆ ಬಂದರೆ ನಾವು ಕೂಡ ಕೇಸರಿ ಶಲ್ಯ ಧರಿಸಿ ಶಾಲೆಗೆ ಬರುತ್ತೇವೆ. ಸುಮಾರು 30 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ, ನಾವು 50ಕ್ಕೆ ಹೆಚ್ಚು ಮಂದಿ ಕೇಸರಿ ಶಾಲು ಧರಿಸಿ ಬಂದಿದ್ದೇವೆ. ನಾಳೆಯಿಂದ ಎಲ್ಲಾ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಇನ್ನೂ ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಂಶುಪಾಲರಾದ ಡಾ.ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯ ಮಾಡಿದ್ದೇವೆ. ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿದೆ. ಆದರೆ ಕಾಲೇಜಿನಲ್ಲಿ ಇನ್ನೂ ಸಮವಸ್ತ್ರ ಹಂಚಿಕೆಯಾಗಿಲ್ಲ. ಸಮವಸ್ತ್ರ ಬಂದ ನಂತರ ಸರ್ಕಾರದ ನಿಯಮ ಪಾಲಿಸುತ್ತೇವೆ ಎಂದು ಹೇಳಿದರು.