ಅತ್ತ ರಷ್ಯಾ ದಾಳಿ, ಇತ್ತ ಕೋವಿಡ್ ಹಾವಳಿ; ಸಂಕಷ್ಟದಲ್ಲಿ ಉಕ್ರೇನ್!

Prasthutha|

ಕೀವ್‌:  ದೇಶದ ಗಡಿ ಪ್ರಾಂತ್ಯಗಳಲ್ಲಿನ ನಗರಗಳ ಮೇಲೆ ರಷ್ಯಾ ಪಡೆಗಳಿಂದ ದಾಳಿ ಒಂದು ಕಡೆಯಾದರೆ, ಮತ್ತೊಂದು ಕಡೆ ದೇಶದಲ್ಲಿ ಕೊರೊನಾ ಸೋಂಕು ಹಾಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಸುಳಿಯಲ್ಲಿ ಉಕ್ರೇನ್ ವಿಲ ವಿಲನೆ ಒದ್ದಾಡುತ್ತಿದೆ.

- Advertisement -

ಯುದ್ಧ ಪ್ರಾರಂಭದ ವೇಳೆ ಇನ್ನೂ ಕೋವಿಡ್ ನಿಯಂತ್ರಣಕ್ಕೆ ಬಾರದೇ ನಿಭಾಯಿಸುವುದೇ ಕಷ್ಟಕರ ಎಂಬ ಪರಿಸ್ಥಿತಿಯಲ್ಲಿರುವಾಗ, ಫೆಬ್ರವರಿ 24ರಂದು ರಷ್ಯಾ ದಾಳಿ ಆರಂಭಿಸುವ ಮೂಲಕ ದಿಢೀರ್ ಯುದ್ಧ ಪ್ರತ್ಯಕ್ಷವಾಗಿದೆ. ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗಿರುವ ದೇಶಗಳಲ್ಲಿ ಉಕ್ರೇನ್‌ ಕೂಡ ಒಂದಾಗಿದ್ದು, ಕಳೆದ ವಾರ ಉಕ್ರೇನ್‌ನಲ್ಲಿ ಕೊರೋನಾ ಸಾವಿನ ಸಂಖ್ಯೆ 26,740ರಷ್ಟಿತ್ತು. ಕೇವಲ 4.4 ಕೋಟಿ ಜನಸಂಖ್ಯೆಯಿರುವ ಉಕ್ರೇನ್‌ ರಾಷ್ಟಕ್ಕೆ ಈ ಸಾವಿನ ಸಂಖ್ಯೆ ದೊಡ್ಡದೇ ಆಗಿದೆ.

ದೇಶದ ಶೇ. 35.6ರಷ್ಟು ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್‌ ನೀಡಲಾಗಿದ್ದು, ಎರಡನೇ ಡೋಸ್‌ ಪಡೆದವರ ಪ್ರಮಾಣ ಶೇ. 34.3 ಮತ್ತುಬೂಸ್ಟರ್‌ ಡೋಸ್‌ ಪಡೆದವರ ಪ್ರಮಾಣ ಶೇ. 1.6ರಷ್ಟಿದೆ.

- Advertisement -

ಉಕ್ರೇನ್‌ ವಿರೋಧಿ ಬಂಡುಕೋರರ ಹಿಡಿತದಲ್ಲಿದ್ದ ಡೊನೆಟ್ಸ್‌ ಹಾಗೂ ಲುಹಾನ್ಸ್ಕ್ ಗಳಲ್ಲಿಯೂ ಸಾವಿನ ಸಂಖ್ಯೆ ಅಧಿಕವಾಗಿತ್ತು. ಹೀಗಾಗಿ, ಕೊರೊನಾ ನಿಯಂತ್ರಿಸುವಲ್ಲಿ ಹೈರಾಣಾಗಿದ್ದ ಉಕ್ರೇನ್‌ನ ತನ್ನ ಬಜೆಟ್‌ನಲ್ಲಿ ಗಣನೀಯ ಮೊತ್ತವನ್ನು ಆರೋಗ್ಯ ಇಲಾಖೆಗೆ ನೀಡುತ್ತಿತ್ತು.

ಈವರೆಗೆ 137 ಉಕ್ರೇನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅಸಹಾಯಕ ಉಕ್ರೇನ್ ಯುದ್ಧ ಮುಂದುವರಿದಂತೆಲ್ಲಾ ಸಾವಿನ ಸಂಖ್ಯೆಯೂ ಹೆಚ್ಚುವ ಭೀತಿಯಲ್ಲಿದೆ.



Join Whatsapp