ನೀರಿನ ಬೆಲೆ ಹೆಚ್ಚಾಗಿದೆಯೇ ಹೊರತು ಪೆಟ್ರೋಲ್ ಬೆಲೆ ಅಲ್ಲ
ತಿನ್ಸುಕಿಯಾ: ನೀರು ದುಬಾರಿಯೇ ವಿನಃ ಪೆಟ್ರೋಲ್ ಅಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ತೈಲ ಬೆಲೆ ಹೆಚ್ಚಳಕ್ಕೆ ಸಮಾಜಾಯಿಷಿ ನೀಡಿದ್ದಾರೆ.
ನೀವು ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುತ್ತೀರಿ. ಅದಕ್ಕೆ ಹಣ ಎಲ್ಲಿಂದ ಬರುತ್ತದೆ? ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಲು ಕಾರಣ ಎಂದು ಸಚಿವರು ವಿಲಕ್ಷಣ ವಾದ ಮುಂದಿಟ್ಟಿದ್ದಾರೆ.
ತೆರಿಗೆ ಹಾಕುವ ಮೂಲಕ ಅವುಗಳ ಬೆಲೆಯನ್ನು ಹೆಚ್ಚು ಮಾಡಲಾಗಿದೆ. ಕುಡಿಯುವ ನೀರಿನ ಬಾಟಲಿ ಬೆಲೆಯ ಮೇಲೆ ಹಾಕುವ ತೆರಿಗೆ ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆಗಿಂತ ಹೆಚ್ಚಿದೆ ಎಂದಿದ್ದಾರೆ.
ಒಂದು ವೇಳೆ ನೀವು ‘ಹಿಮಾಲಯನ್ ವಾಟರ್’ ನೀರಿನ ಬಾಟಲಿ ಖರೀದಿಸಿದರೆ ಅದರ ಬೆಲೆ ನೂರು ರೂಪಾಯಿ ಇರುತ್ತದೆ ಎಂದು ಅವರು ವಿಚಿತ್ರ ವಾದ ಮಂಡಿಸಿದ್ದಾರೆ.