ಸಿಎಂ ಕುರ್ಚಿಯನ್ನು ಫಡ್ನವೀಸ್- ಶಿವಸೇನೆಯ ಶಿಂಧೆಗೆ ಬಿಟ್ಟುಕೊಟ್ಟ ಕಾರಣ ಬಹಿರಂಗ!

Prasthutha|

►ಸರ್ಕಾರದ ಮೇಲೆ ಬಿಜೆಪಿಗೆ ಸಂಪೂರ್ಣ ಹಿಡಿತ

- Advertisement -

ಮುಂಬೈ: 106 ಶಾಸಕರನ್ನು ಹೊಂದಿದ್ದರೂ ಸಿಎಂ ಕುರ್ಚಿಯನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಜೂನ್ 30 ರ ಸಂಜೆ ಬಿಟ್ಟುಕೊಟ್ಟಿದ್ದರು. ಠಾಕ್ರೆ ಸರಕಾರ ಮುರಿದು ಬೀಳಲು ಬಿಜೆಪಿ ಹರಸಾಹಸ ಪಟ್ಟಿದ್ದರೂ ಕೊನೆಗೆ ಯಾಕೆ ಮುಖ್ಯಮಂತ್ರಿ ಬಿಟ್ಟುಕೊಟ್ಟಿತು ಎಂಬ ಕಾರಣ ಈಗ ಬಹಿರಂಗವಾಗಿದೆ.

ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರ ಪುತ್ರ ಉದ್ಧವ್ ಮತ್ತು ಮೊಮ್ಮಗ ಆದಿತ್ಯ ಅವರ ವರ್ಚಸ್ಸನ್ನು ಪಕ್ಷ ಮತ್ತು ರಾಜ್ಯ ರಾಜಕಾರಣದಲ್ಲಿ ಕುಗ್ಗಿಸುವ ಏಕೈಕ ಉದ್ದೇಶದಿಂದ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ.

- Advertisement -

ಹಿರಿಯ ರಾಜಕೀಯ ವಿಶ್ಲೇಷಕರಾದ ಜಯ್ ಪ್ರಕಾಶ್ ಸಿಂಗ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದು, 39 ಶಾಸಕರ ಬೆಂಬಲದೊಂದಿಗೆ, ಶಿಂಧೆ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಮಾತ್ರವಲ್ಲದೆ ಪಕ್ಷದಲ್ಲೂ ವ್ಯವಹಾರಗಳ ಚುಕ್ಕಾಣಿ ಹಿಡಿಯಲಿದ್ದಾರೆ. ಶಿಂಧೆ ಅವರ ಆಗಮನದೊಂದಿಗೆ ಪಕ್ಷದಲ್ಲಿ ಉದ್ಧವ್ ಠಾಕ್ರೆ ಅವರ ಪ್ರಾಮುಖ್ಯತೆ ಗಮನಾರ್ಹವಾಗಿ ಕುಸಿಯುತ್ತದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರು ಅಧಿಕಾರ ಸ್ವೀಕರಿಸಿದ್ದು, ಫಡ್ನವೀಸ್ ಅವರೇ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ವಿಧಾನಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿದ್ದು, ಸರ್ಕಾರದ ಸುಗಮ ಕಾರ್ಯನಿರ್ವಹಣೆಯನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಈ ಕ್ರಮವು ಹಿಂದುತ್ವದ ಸಲುವಾಗಿ ಸಿಎಂ ಕುರ್ಚಿಯನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ರಾಜ್ಯದಲ್ಲಿ ಮುಂಬರುವ ನಾಗರಿಕ ಚುನಾವಣೆಗಳಲ್ಲಿ ಫಡ್ನವೀಸ್ ಮತ್ತು ಬಿಜೆಪಿ ಸಹಾನುಭೂತಿ ಮತಗಳನ್ನು ಗಳಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಶಿಂಧೆ ಬಣದ 14-18 ಶಾಸಕರಿಗೆ ಮಾತ್ರ ಸರ್ಕಾರದಲ್ಲಿ ಅವಕಾಶ ಕಲ್ಪಿಸಬಹುದು ಮತ್ತು ಆ ಮೂಲಕ ಸರ್ಕಾರವನ್ನು ಅಂಚಿಗೆ ತಳ್ಳುತ್ತದೆ ಎನ್ನಲಾಗಿದೆ. ಒಟ್ಟಿನಲ್ಲಿ ಇದು  ಬಿಜೆಪಿಯ ‘ವಿಶಾಲ ಹೃದಯವೋ, ಮಾಸ್ಟರ್ ಸ್ಟ್ರೋಕೋ ಅಲ್ಲ, ಬದಲಾಗಿ ಇದು ಒಂದೇ ಕಲ್ಲಿನಿಂದ ಹಲವಾರು ಪಕ್ಷಿಗಳನ್ನು ಮತ್ತು ಹುಲಿಯ ಮರಿಯನ್ನು ಕೊಲ್ಲಲು ಬಿಜೆಪಿ ಮಾಡಿದ ಕುತಂತ್ರ ಎಂದು ಜಯ್ ಪ್ರಕಾಶ್ ಸಿಂಗ್ ಹೇಳಿದ್ದಾರೆ


Join Whatsapp