ಬಸ್ಸಿನ ಹೊರಭಾಗಲ್ಲಿದ್ದ ಕುದುರೆಯ ಪೈಂಟಿಂಗ್ ಕಂಡು ಹಿಂಬಾಲಿಸಿದ ನೈಜ ಕುದುರೆ

Prasthutha|

ಕೋಯಂಬತ್ತೂರ್: ಖಾಸಗಿ ಬಸ್‌ನಲ್ಲಿದ್ದ ಕುದುರೆಯ ಪೈಂಟಿಂಗ್ ನೋಡಿ ಜೀವಂತ ಕುದುರೆಯೊಂದು ಬಸ್ಸನ್ನು ಹಿಂಬಾಲಿಸಿಕೊಂಡು ಓಡಿದ ಘಟನೆ ಇಲ್ಲಿನ ಶೆಲ್ವಪುರದಲ್ಲಿ ನಡೆದಿದೆ.

- Advertisement -

ಹೊರಭಾಗದಲ್ಲಿ ಬೃಹತ್ ಆಕಾರದಲ್ಲಿ ಕುದುರೆಯ ಪೈಂಟಿಂಗ್ ಇದ್ದ ಖಾಸಗಿ ಬಸ್ಸೊಂದು ಶೆಲ್ವಪುರಿಯ ಥಿಯೆಟರ್ ಸಮೀಪದ ನಿಲ್ದಾಣದಲ್ಲಿ ಬಂದು ನಿಲ್ಲಿಸಿತ್ತು. ಇದನ್ನು ಕಂಡ ನೈಜ ಕುದುರೆಯೊಂದು ಬಸ್ಸಿನ ಬಳಿ ಬಂದಿದ್ದು, ಕುದುರೆಯನ್ನು ಬಾಯಿ ಮೂಲಕ ಸ್ಪರ್ಶಿಸತೊಡಗಿದೆ. ಈ ಸಂದರ್ಭದಲ್ಲಿ ಬಸ್ಸು ಹೊರಟಿದ್ದು, ಕುದರೆ ಕೂಡಾ ಕುದುರೆ ಚಿತ್ರಕ್ಕೆ ಸಮಾನಾಂತರವಾಗಿ ಶಬ್ದ ಮಾಡುತ್ತಾ ಬಸ್ಸಿನೊಂದಿಗೆ ಓಡಿದೆ.

ಈ ದೃಶ್ಯಗಳನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದಿದ್ದು, ಬಳಿಕ ಈ ವೀಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.



Join Whatsapp