ಒತ್ತುವರಿ ತೆರವಿಗಾಗಿ ‘ಬಜರಂಗ ಬಲಿ’ಗೆ ನೋಟಿಸ್ ನೀಡಿದ ರೈಲ್ವೆ ಇಲಾಖೆ!

Prasthutha|


ಭೋಪಾಲ್: ಮಧ್ಯಪ್ರದೇಶದ ಸಬಲ್ ಗಡದಲ್ಲಿ ರೈಲ್ವೆ ಜಾಗವನ್ನು ಆಕ್ರಮಿಸಿಕೊಂಡಿರುವುದನ್ನು ಒಂದು ವಾರದೊಳಗೆ ತೆರವು ಮಾಡುವಂತೆ ರೈಲ್ವೆ ಇಲಾಖೆಯು ಹಿಂದೂಗಳ ದೇವರು ಎಂದು ನಂಬುವ ಬಜರಂಗ ಬಲಿಗೆ ನೋಟಿಸ್ ನೀಡಿದೆ.

- Advertisement -


ರೈಲ್ವೆಗೆ ಸೇರಿದ ಮಧ್ಯಪ್ರದೇಶ ರಾಜ್ಯದ ಮೊರೇನಾ ಜಿಲ್ಲೆಯ ಸಬಲ್’ಗಡದಲ್ಲಿ ಈ ಘಟನೆ ನಡೆದಿದ್ದು, ತಪ್ಪಿನ ಅರಿವಾದ ಬಳಿಕ ಇಲಾಖೆಯು ನೋಟಿಸ್ ವಾಪಸ್ ಪಡೆದಿದೆ ಎಂದು ತಿಳಿದು ಬಂದಿದೆ.
ಫೆಬ್ರವರಿ 8ರಂದು ಒತ್ತುವರಿ ಖಾಲಿ ಮಾಡುವಂತೆ ‘ಬಜರಂಗ ಬಲಿ’ಗೆ ನೋಟಿಸ್ ನೀಡಲಾಗಿದೆ. ನಿರ್ಮಾಣ ತೆರವುಗೊಳಿಸಲು ರೈಲ್ವೆಯು ಕ್ರಮ ತೆಗೆದುಕೊಂಡಲ್ಲಿ ಅದರ ವೆಚ್ಚವನ್ನು ಬಜರಂಗ ಬಲಿಯೇ ಭರಿಸಬೇಕು ಎಂದು ಸಹ ನೋಟೀಸಿನಲ್ಲಿ ಹೇಳಲಾಗಿತ್ತು.


ಹನುಮಂತನ ಗುಡಿಯ ಗೋಡೆಗೆ ನೋಟಿಸ್ ಅಂಟಿಸಲಾಗಿತ್ತು.
ಈ ನೋಟಿಸ್ ವೈರಲ್ ಆಗಿ ಒಂದಷ್ಟು ಗದ್ದಲ ಎದ್ದುದನ್ನು ಕಂಡ ರೈಲ್ವೆ ಇಲಾಖೆಯು ಆ ನೋಟಿಸನ್ನು ಹಿಂದಕ್ಕೆ ಪಡೆದು, ಸದರಿ ದೇವಾಲಯದ ಅರ್ಚಕರ ಹೆಸರಿಗೆ ನೋಟಿಸ್ ನೀಡಿದೆ.

- Advertisement -


ಮೊದಲು ತಪ್ಪು ತಿಳಿವಳಿಕೆಯಿಂದ ನೋಟಿಸ್ ನೀಡಲಾಗಿತ್ತು ಎಂದು ಜಾನ್ಸಿ ರೈಲ್ವೆ ವಲಯದ ಪಿಆರ್’ಓ- ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಮಾಥುರ್ ಹೇಳಿದರು.


“ಈಗ ಅರ್ಚಕರ ಹೆಸರಿಗೆ ನೋಟಿಸ್ ನೀಡಲಾಗಿದೆ” ಎಂದೂ ಅವರು ಹೇಳಿದರು.
ಜಾನ್ಸಿ ರೈಲ್ವೆ ವಲಯದ ಹಿರಿಯ ವಿಭಾಗೀಯ ಎಂಜಿನಿಯರ್ ಅವರು ಮೊದಲು ಬಜರಂಗ ಬಲಿ ಹೆಸರಿನಲ್ಲಿ ನೋಟಿಸ್ ನೀಡಿದ್ದರು.
ಶೇವೋಪುರ್- ಗ್ವಾಲಿಯರ್ ಬ್ರಾಡ್ ಗೇಜ್ ರೈಲು ಹಳಿ ಕಟ್ಟುಗೆಗೆ ಜಾಗ ಬೇಕಾಗಿದೆ ಎಂದೂ ನೋಟಿಸ್’ನಲ್ಲಿ ಹೇಳಲಾಗಿದೆ.


ಹೊಸ ನೋಟೀಸನ್ನು ಫೆಬ್ರವರಿ 10ರಂದು ಗುಡಿಯ ಅರ್ಚಕ ಹರಿಶಂಕರ್ ಶರ್ಮಾ ಹೆಸರಿಗೆ ನೀಡಲಾಗಿದೆ.



Join Whatsapp