ಈಡೇರದ ಸಚಿವ ಸ್ಥಾನದ ಭರವಸೆ; ಪಕ್ಷದ ಹಿರಿಯರ ಮೇಲೆ ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಈಶ್ವರಪ್ಪ

Prasthutha|

ಬೆಂಗಳೂರು: ನನಗೆ ಸಚಿವ ಸ್ಥಾನ ವಾಪಸ್‌ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಇದುವರೆಗೂ ಭರವಸೆ ಈಡೇರಿಸಲಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಪಕ್ಷದ ಹಿರಿಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನನ್ನ ಮೇಲೆ ನಿರಾಧಾರವಾದ ಆರೋಪ ಬಂದಾಗ ಕೇಂದ್ರದ ನಾಯಕರಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ  ವಿಚಾರ ತಿಳಿಸಿದೆ. ಆಗ ಎಲ್ಲರೂ ಬೇಡ ಅಂದಿದ್ದರು. ನನ್ನ ಕೇಸ್’ನ ತನಿಖೆಯಾದಾಗ ಈ ಕೇಸ್ ನಿರಾಧಾರ ಅಂತ ತೀರ್ಪು ಬಂದು ನನಗೆ ಕ್ಲೀನ್ ಚಿಟ್ ಸಿಕ್ಕಿತು. ಕ್ಲೀನ್ ಚಿಟ್‌ ಬಂದು 4 ತಿಂಗಳಾಯಿತು. ಆದರೆ ನಾನು ಯಾವುದೇ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ವಾಹಿನಿಗೆ ಇಂಟರ್‌ವ್ಯೂ ನೀಡಿದ ಸಿ ಎಂ ಅವರು, ರಮೇಶ್ ಜಾರಕಿಹೊಳಿ‌ ಹಾಗು ಈಶ್ವರಪ್ಪರವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದರಿಂದ ಅವರಿಗೆ ಸ್ಥಾನ ನೀಡಲಾಗುತ್ತೆ ಎಂದಿದ್ದಾರೆ. ಸಿಎಂರವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದಷ್ಟು ಬೇಗ ನಮ್ಮನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಿ‌ ಅಂತ ಆಶಿಸುತ್ತೇನೆ ಎಂದು ಹೇಳಿದರು.

- Advertisement -

ರಾಜ್ಯದ ಪಕ್ಷಕ್ಕೂ ನನ್ನ ನಡೆ ಮುಜುಗರ ಆಗದಂತೆ‌ ಎಚ್ಚರ ವಹಿಸಿದ್ದೇನೆ. ‘ನನಗೆ ಸಚಿವ ಆಗಬೇಕು ಅಂತ ಆಸೆ ಇಲ್ಲ. ಆಪಾದನೆಯಿಂದ ಕ್ಲೀನ್ ಆಗಿ ಹೊರಬಂದಿದ್ದೇನೆ. ನನ್ನನ್ನು ವಾಪಸ್ ಸಚಿವನನ್ನಾಗಿ ಮಾಡ್ತೀನಿ ಅಂತ ಬಿಎಸ್‌ವೈ, ಸಿಎಂ ಹಾಗೂ ಕಟೀಲ್‌ ಹೇಳಿದ್ದರು. ರಾಜ್ಯದ ನಾಯಕರನ್ನು ಹೈಕಮಾಂಡ್ ನಿರ್ಲಕ್ಷ್ಯ ಮಾಡಿಲ್ಲ. ಬಿಎಸ್‌ವೈ‌ಗೇ ಕೇಂದ್ರದಲ್ಲಿ ಜಾಗ ಕೊಟ್ಟಿದ್ದಾರೆ. ಸಿಎಂ ಅವರನ್ನು ನಂಬ್ತೀನಿ. ಅವರ ಹತ್ರ ಮಾತಾಡಿ ತೀರ್ಮಾನ ಮಾಡ್ತೀನಿ. ನಾನು ಸಚಿವನಾಗದೇ ಇರುವ ಪಿತೂರಿ ಬಗ್ಗೆ ಪ್ರಸ್ತಾಪ ಮಾಡಲ್ಲ.ಪಕ್ಷವನ್ನು 2-3 ಭಾಗ ಮಾಡಲು ಇಷ್ಟ ಇಲ್ಲ  ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ‌ ಮಾಡಿದ ಕಾಂಗ್ರೆಸ್ಸಿಗರು ಸ್ವರ್ಗದಲ್ಲಿದ್ದಾರೆ. ರಾಷ್ಟ್ರವನ್ನು ಉಳಿಸುವುದಾಗಿತ್ತು ಅವರ ಅಪೇಕ್ಷೆ. ಅವರಿಗೆ ಈಗಿನ ಕಾಂಗ್ರೆಸ್ ಅಪಮಾನ ಮಾಡಬಾರದು’ ಎಂದು ಹೇಳಿದರು.



Join Whatsapp